More

    ಲಸಿಕೆ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ

    ಬಾದಾಮಿ: ತಾಲೂಕಿನಾದ್ಯಂತ ಸೆ.26 ರಿಂದ ಅಕ್ಟೋಬರ್ 25 ರವರೆಗೆ ಜಾನುವಾರಿಗೆ 4ನೇ ಸುತ್ತಿನ ಕಾಲು ಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.
    ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಯಾವುದೇ ಜಾನುವಾರು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲ ಗ್ರಾಮಗಳ ಮೈಕ್ರೋ ಪ್ಲಾೃನ್‌ಗಳ ಮೂಲಕ ಕಾರ್ಯಕ್ರಮವನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಗ್ರಾಮಮಟ್ಟದಲ್ಲಿ ಡಂಗುರ, ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ಲಸಿಕೆ ಕಾರ್ಯಕ್ರಮದ ಪ್ರಚಾರ ಮಾಡಬೇಕು. ರೈತರು ಅಗತ್ಯ ಮಾಹಿತಿಗೆ ಸಹಾಯವಾಣಿ 8277100200 ಹಾಗೂ ಚಿಕಿತ್ಸೆಗಾಗಿ ಪಶು ಸಂಜೀವಿನಿ ಸಹಾಯವಾಣಿ ಸಂಖ್ಯೆ (1962)ಗೆ ಸಂಪರ್ಕಿಸಬಹುದಾಗಿದೆ ಎಂದರು.

    ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ ಸಬನೀಸ್ ಮಾತನಾಡಿದರು. ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಮುಖಂಡ ಹನುಮಂತ ಅಪ್ಪನ್ನವರ ಸೇರಿ ರೈತರು, ಪಶು ಆಸ್ಪತ್ರೆ ಸಿಬ್ಬಂದಿ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts