More

  ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಿರಿ

  ಕರಜಗಿ: ಪ್ರತಿ ರೈತ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ಕರಜಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೈಫನ್ ಮು¯್ಲÁ ತಿಳಿಸಿದರು.

  ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಕಲ್ಪ ಸಪ್ತಾಹ ಕೃಷಿ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕರಜಗಿಯ 186 ರೈತರು ಇನ್ನು ಕೆವೈಸಿ ಮಾಡಿಸಿಕೊಂಡಿಲ್ಲ. 121 ಜನರಿಗೆ ಬೆಳೆ ಪರಿಹಾರ ಬಂದಿಲ್ಲ. ಹೀಗಾಗಿ ರೈತರು ಬ್ಯಾಂಕ್‌ಗೆ ಭೇಟಿ ನೀಡಿ ಅಗತ್ಯ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

  ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪಾಠೋಳಿ ಉದ್ಘಾಟಿಸಿದರು. ಪಿಡಿಒ ಮಲ್ಲಿಕಾರ್ಜುನ ಕಂಬಾರ, ಪ್ರಮುಖರಾದ ಇರ್ಫಾನ್ ಜಮಾದಾರ, ಬಶೀರ್ ಚೌಧರಿ, ಕರೆಪ್ಪ ಹಿರೇಕುರುಬರ, ಪೀರಪ್ಪ ನೈಕೋಡಿ, ಅಭಿಷೇಕ ರೋಡಗಿ, ಶಫಿಕ್ ಚೌಧರಿ, ಗಪೂರ್ ಪಠಾಣ್, ಉಸ್ಮಾನ್, ಅಂಬು ರಾಠೋಡ್, ಅಶೋಕ ದೇವಣಗಾಂವ್ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 27

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts