ನರಗುಂದ: ಬೀದಿನಾಯಿಗಳ ಹಾವಳಿಯಿಂದ ಜನತೆಗೆ ಹೈರಾಣಾಗಿದ್ದು, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಮೂಲನಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಪುರಸಭೆ ವ್ಯವಸ್ಥಾಪಕ ಮಲ್ಲೇಶ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ನಿವಾಸಿ ವೀರೇಶ ದೊಡ್ಡಕಾಳೆ ಅವರ ಮೂರು ವರ್ಷದ ಮಗ ರುದ್ರೇಶ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಸಂದಭ್ದಲ್ಲಿ ಆತನ ಮೇಲೆ ಏಕಾಏಕಿ ದಾಳಿ ಮಾಡಿದ ನಾಯಿ ಮುಖ, ಮೈ ಹಾಗೂ ಕೈಗಳಿಗೆ ಕಚ್ಚಿ ಗಾಯಗೊಳಿಸಿದೆ. ಗಂಭೀರ ಗಾಯಗಳಾಗಿದ್ದ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲ ವಾಡ್ಗಳಲ್ಲಿಯೂ ನಾಯಿ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಜೀವಕೈಯಲ್ಲಿಡು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಬೀದಿನಾಯಿಗಳನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಸಮಿತಿ ಸಂಚಾಲಕ ನಂದೀಶ ಮಠದ, ಸದಾನಂದ ರಾಯರಡ್ಡಿ, ಸುನೀಲ ಬೆಳಗಾವಿ, ಅಭಿಷೇಕ ಕರಿಕಟ್ಟಿ, ಶಶಿಕುಮಾರ ಬೋಯಿಟೆ, ಅಭಿಷೇಕ ನಿಕಂ, ಶಿವಾನಂದ ನಾಗನೂರ, ಮಾಂತೇಶ ಫಿರಂಗಿ, ಶ್ರೀಧರ ಹೆಬಸೂರ, ಪ್ರದೀಪ ಹಟ್ಟಿ, ಪುಂಡಲೀಕ ಹವಾಲ್ದಾರ, ವಿನಾಯಕ ಚಿಗೋಳ್ಳಿ, ಮಂಜುನಾಥ ರಾಮಣ್ಣವರ, ರವಿ ಕೀಲಿಕೈ, ಮಂಜುನಾಥ ಪಲ್ಲೇದ, ಸಂಗು ಚರಂತಿಮಠ, ಇತರರಿದ್ದರು.