ನಾಳೆ ಜನ ಸಂಪರ್ಕ ಸಭೆ

ಜಮಖಂಡಿ: ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಸೆ. 11ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿ ಕಾರಿ ಶಾಂತಾರಾಮ ಕೆ.ಜಿ. ಅವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ ಎಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.

ನಗರದ ಮಿನಿ ವಿಧಾನಸೌಧ ಸಭಾ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನ ಸಂಪರ್ಕ ಸಭೆ ಹಿನ್ನೆಲೆ ಏಪಿಎಂಸಿ ಸಭಾ ಭವನದ ಆವರಣದಲ್ಲಿ ಎಲ್ಲ ಇಲಾಖೆಗಳ ಕೌಂಟರ್ ನಿರ್ವಿುಸ ಲಾಗುವುದು. ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅರ್ಜಿ ಪಡೆದುಕೊಳ್ಳಬೇಕು. ಕುಂದುಕೊರತೆ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಇಲಾಖೆ ಮುಖ್ಯಾಧಿಕಾರಿ ಕಡ್ಡಾಯವಾಗಿ ಸಭೆಯಲ್ಲಿ ಹಾಜರಿರಬೇಕು. ಗ್ರಾಮೀಣ ಪ್ರದೇಶ ಗಳಲ್ಲಿ ಡಂಗುರ ಸಾರಿಸಿ ಎಂದು ತಾಪಂ ಇಒ ಎ.ಜಿ. ಪಾಟೀಲ ಅವರಿಗೆ ಸೂಚಿಸಿದರು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ಒಂದು ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಮಿನಿ ವಿಧಾನಸೌಧ ಸಭಾ ಭವನದಲ್ಲಿ ಬೆಳಗ್ಗೆ 11ರಿಂದ 12ರವರೆಗೆ ಡಿಸಿ ಅಧ್ಯಕ್ಷತೆಯಲ್ಲಿ ಗಣೇಶ ಉತ್ಸವ, ಮೋಹರಂ ಹಬ್ಬದ ನಿಮಿತ್ತ ಶಾಂತಿ ಪಾಲನೆ ಸಭೆ ನಡೆಯಲಿದೆ ಎಂದು ಹೇಳಿದರು. ಎಸಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಎಸ್.ಎಸ್. ನಾಯ್ಕಲಮಠ ಇದ್ದರು.

Leave a Reply

Your email address will not be published. Required fields are marked *