ನಟ, ಯಶ್, ಕೆಜಿಎಫ್, ವಿದ್ಯುತ್, ಬೆದರಿಕೆ

ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಸಾರದ ಸಮಯದಲ್ಲಿ ವಿದ್ಯುತ್ ಪೂರೈಕೆ ಕಡಿತ ಮಾಡಿದರೆ ಹುಷಾರ್ ಎಂದು ಬೆದರಿಕೆ ಪತ್ರ ಬಂದಿರುವ ಬಗ್ಗೆ ಶುಕ್ರವಾರ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇಬ್ಬರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭದ್ರಾವತಿಯಲ್ಲಿ ಮಾರ್ಚ್ 30ರಂದು ವಿದ್ಯುತ್ ಪೂರೈಕೆ ಕಡಿತ ಮಾಡಿದರೆ ಹುಷಾರ್.., ನೀವೂ ಇರಲ್ಲ, ನಿಮ್ಮ ಆಫೀಸೂ ಇರಲ್ಲ, ಸುಟ್ಟು ಭಸ್ಮ ಮಾಡುತ್ತೇವೆಂದು ಅನಾಮಧೇಯ ಪತ್ರವೊಂದು ಗುರುವಾರ ಭದ್ರಾವತಿ ಮೆಸ್ಕಾಂ ಇಂಜಿನಿಯರ್ ಕಚೇರಿಗೆ ತಲುಪಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಮೆಸ್ಕಾಂ ಎಇಇ ಸುರೇಶ್ ನ್ಯೂಟೌನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾ.30ರಂದು ಕೆಜಿಎಫ್ ಚಿತ್ರ ಟಿವಿಯಲ್ಲಿ ಪ್ರಸಾರವಾಗಲಿದ್ದು, ಕರೆಂಟ್ ತೆಗೆದರೆ ನಿಮ್ಮ ಆಫೀಸ್​ಗೆ ಬಾಂಬ್ ಫಿಕ್ಸ್ ಮಾಡ್ತೀವಿ ಎಂದು ಅಂಚೆ ಪತ್ರದಲ್ಲಿ ಬರೆದಿದ್ದು, ಶನಿವಾರ ಸಂಜೆ ಕರೆಂಟ್ ಕಡಿತಗೊಳಿಸದಂತೆ ಎಚ್ಚರಿಕೆ ನೀಡಲಾಗಿದೆ.

ಅನಾಮಧೇಯ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದು, ಮೆಸ್ಕಾಂ ಕಚೇರಿಗೆ ಶುಕ್ರವಾರ ಬೆಳಗ್ಗೆಯೇ ವಿಧ್ವಂಸಕ ಕೃತ್ಯ ನಿಷ್ಕ್ರಿಯ ತಂಡ ಪರಿಶೀಲಿಸಿತು. ಯಾವುದೇ ವಿಧ್ವಂಸಕ ವಸ್ತುಗಳು ಪತ್ತೆಯಾಗಿಲ್ಲ. ಮುಂಜಾಗ್ರತೆಯಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಎಸ್ಪಿ ಡಾ. ಎಚ್.ಟಿ.ಶೇಖರ್ ‘ವಿಜಯವಾಣಿ’ಗೆ ತಿಳಿಸಿದರು.

ಸಾಂಘಿಕ ಶಕ್ತಿಯಿಂದ ಮಹತ್ತರ ಸಾಧನೆ

ಸಾಗರ: ಕೈಗೊಳ್ಳುವ ಕಾಯಕದಲ್ಲಿ ಶ್ರದ್ಧೆ, ಛಲ ಮತ್ತು ನಂಬಿಕೆ ಇರಬೇಕು. ಸಾಂಘಿಕ ಶಕ್ತಿಯಿಂದ ಮಹತ್ತರ ಸಾಧನೆ ಸಾಧ್ಯ. ಅದಕ್ಕೆ ಎಂದಿಗೂ ಸೋಲಿಲ್ಲ ಎಂದು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.…

View More ಸಾಂಘಿಕ ಶಕ್ತಿಯಿಂದ ಮಹತ್ತರ ಸಾಧನೆ

ಸುಪ್ರೀಂಕೋರ್ಟ್ ಆದೇಶಕ್ಕೆ ರಾಮಚಂದ್ರಾಪುರ ಮಠದ ಭಕ್ತರ ಸಂಭ್ರಮ

ಹೊಸನಗರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಮರಳಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಹಿನ್ನೆಲೆಯಲ್ಲಿ ಮಠದ ಭಕ್ತರು ಹೊಸನಗರದಲ್ಲಿ ಸಂಭ್ರಮಿಸಿದರು. ಪಟ್ಟಣದ ಬಸ್ ನಿಲ್ದಾಣ ಎದುರು ಸೇರಿದ್ದ ಶ್ರೀ ರಾಮಚಂದ್ರಾಪುರ ಮಠದ ಅಭಿಮಾನಿಗಳು,…

View More ಸುಪ್ರೀಂಕೋರ್ಟ್ ಆದೇಶಕ್ಕೆ ರಾಮಚಂದ್ರಾಪುರ ಮಠದ ಭಕ್ತರ ಸಂಭ್ರಮ