ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥ್ನಲ್ಲಿ ನಡೆದ ವಿವಿಧ ರಾಜ್ಯಗಳ ಟ್ಯಾಬ್ಲೋಗಳ ಆಕರ್ಷಕ ಪ್ರದರ್ಶನ ದೇಶದ ಸಂಸ್ಕೃತಿಯನ್ನ ಅನಾವರಣ ಗೊಳಿಸಿತ್ತಲ್ಲದೆ, 74ನೇ ಗಣರಾಜ್ಯೋತ್ಸವದ ಸಂಭಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಈ ಬಾರಿ ಒಟ್ಟು 17 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಕರ್ನಾಟಕದ ಸ್ತಬ್ಧಚಿತ್ರವು ನಾರಿಯ ಶಕ್ತಿಯನ್ನ ಬಿಂಬಿಸಿ ಗಮನ ಸೆಳೆಯಿತು.
ಪರೇಡ್ನಲ್ಲಿ ಪಾಲ್ಗೊಂಡ ಆಯಾ ರಾಜ್ಯಗಳ ಸ್ತಬ್ಧಚಿತ್ರಗಳ ಥೀಮ್ ಇಲ್ಲಿದೆ.
ಆಂಧ್ರ ಪ್ರದೇಶ-ಪ್ರಭಾಲ ತೀರ್ಥಂ: ಮಕರ ಸಂಕ್ರಾಂತಿ ಸಮಯದಲ್ಲಿ ರೈತರ ಹಬ್ಬ
ಅಸ್ಸಾಂ– ವೀರರ ಮತ್ತು ಆಧ್ಯಾತ್ಮಿಕತೆಯ ನಾಡು
ಲಡಾಖ್– ಪ್ರವಾಸೋದ್ಯಮ ಮತ್ತು ಲಡಾಖ್‌ನ ಸಂಯೋಜಿತ ಸಂಸ್ಕೃತಿ
ಉತ್ತರಾಖಂಡ– ಮಾನಸಖಂಡ
ತ್ರಿಪುರ– ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ತ್ರಿಪುರಾದಲ್ಲಿ ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯ ಮೂಲಕ ಸುಸ್ಥಿರ ಜೀವನೋಪಾಯ
ಗುಜರಾತ್– ಕ್ಲೀನ್ ಗ್ರೀನ್ ಎನರ್ಜಿ ಸಮರ್ಥ ಗುಜರಾತ್
ಜಾರ್ಖಂಡ್– ದಿಯೋಘರ್ನಲ್ಲಿರುವ ಬಾಬಾಧಾಮ್ ಬೈದ್ಯನಾಥ ದೇಗುಲ
ಅರುಣಾಚಲ ಪ್ರದೇಶ– ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮದ ನಿರೀಕ್ಷೆಗಳು
ಜಮ್ಮು ಮತ್ತು ಕಾಶ್ಮೀರ– ನಯಾ ಜಮ್ಮು ಮತ್ತು ಕಾಶ್ಮೀರ
ಕೇರಳ- ನಾರಿ ಶಕ್ತಿ
ಪಶ್ಚಿಮ ಬಂಗಾಳ– ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ: ಯುನೆಸ್ಕೋದಿಂದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಬರೆಯುವುದು
ಮಹಾರಾಷ್ಟ್ರ- ಸಾಡೆ ತೀನ್ ಶಕ್ತಿಪೀಠ ಮತ್ತು ನಾರಿ ಶಕ್ತಿ
ತಮಿಳುನಾಡು– ತಮಿಳುನಾಡಿನ ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ
ಕರ್ನಾಟಕ– ನಾರಿಯ ಶಕ್ತಿಯ ಅನಾವರಣ
ಹರಿಯಾಣ– ಅಂತರಾಷ್ಟ್ರೀಯ ಗೀತಾ ಮಹೋತ್ಸವ
ದಾದರ್ ನಗರ ಹವೇಲಿ ಮತ್ತು ದಮನ್ ಮತ್ತು ದಿಯು- ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ
ಉತ್ತರ ಪ್ರದೇಶ– ಅಯೋಧ್ಯೆ ದೀಪೋತ್ಸವ
ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ.#RepublicDay #74thRepublicDay #KartavyaPath pic.twitter.com/sGcX5YnPr7
— Basavaraj S Bommai (@BSBommai) January 26, 2023