VIDEO| ವ್ಯಕ್ತಿಯ ಗುಪ್ತಾಂಗ ಸ್ಪರ್ಶಿಸಿ ಟ್ರೋಲ್​ಗೆ ಒಳಗಾದ ತಾಪ್ಸಿ ಪನ್ನು: ಇದೇ ರೀತಿ ಪುರುಷರು ಮಾಡಿದ್ರೆ ಸುಮ್ಮನಾಗ್ತಿದ್ರಾ ಎಂದು ಆಕ್ರೋಶ

ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದು, ತಮ್ಮ ನಟನೆಯ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ‘ಮಿಷನ್ ಮಂಗಲ್’ ಚಿತ್ರದ ಟ್ರೇಲರ್​ನಲ್ಲಿರುವ ವ್ಯಕ್ತಿಯ ಗುಪ್ತಾಂಗವನ್ನು ಸ್ಪರ್ಶಿಸುವ ದೃಶ್ಯವೀಗ ವಿವಾದದ ಅಲೆಯನ್ನು ಎಬ್ಬಿಸಿದೆ.

ಗುಪ್ತಾಂಗ ಸ್ಪರ್ಶಿಸುವ ದೃಶ್ಯವನ್ನು ಹಾಸ್ಯದ ದೃಷ್ಟಿಯಿಂದ ಮಾಡಿದ್ದರೂ, ಅದೇ ಇದೀಗ ತಾಪ್ಸಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚಿತ್ರದಲ್ಲಿ ನಟಿ ತಾಪ್ಸಿ ಡ್ರೈವಿಂಗ್ ಕಲಿಯುವ ಸನ್ನಿವೇಶವೊಂದಿದೆ.​ ಈ ವೇಳೆ ಕಾರಿನ ಗೇರ್​ ಬದಲಾಗಿ ತಪ್ಪಾಗಿ ಡ್ರೈವಿಂಗ್​ ಟೀಚರ್​ ಗುಪ್ತಾಂಗವನ್ನು ಹಿಡಿಯುತ್ತಾಳೆ. ಈ ವೇಳೆ ಆತ ನೋವಿನಿಂದ ಕಿರುಚಿಕೊಳ್ಳುವುದು ದೃಶ್ಯದಲ್ಲಿದೆ.

ಮಿಷನ್​ ಮಂಗಲ್​ ಟ್ರೇಲರ್​ನಲ್ಲಿರುವ ಈ ನಿರ್ದಿಷ್ಟ ದೃಶ್ಯವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇರ್​ ಮಾಡಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಪ್ಸಿಯ ನಟನೆಯ ಬಗ್ಗೆ ಸಾಕಷ್ಟು ಟ್ರೋಲ್​ ಮಾಡುತ್ತಿರುವುದಲ್ಲದೆ, ಈ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ತ್ರೀವಾದಿಗಳ ವಿರುದ್ಧವೂ ನೆಟ್ಟಿಗರು ಕಿಡಿಕಾರಿದ್ದಾರೆ.

ಹಾಸ್ಯದ ಹೆಸರಿನಲ್ಲಿ ಇದೇ ದೃಶ್ಯವನ್ನು ಪುರುಷನೊಬ್ಬ ಮಾಡಿದ್ದರೆ, ಚಿತ್ರ ಹಾಗೂ ನಿರ್ದೇಶಕನ ವಿರುದ್ಧ ಸ್ತ್ರೀವಾದಿಗಳು ಸಾಲು ಸಾಲು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಮಹಿಳೆಯೇ ಈ ದೃಶ್ಯವನ್ನು ಮಾಡಿದ್ದರೂ ಯಾರು ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಮಿಷನ್​ ಮಂಗಲ್​ ಚಿತ್ರವನ್ನು ಮಾಡಿರುವುದು ಇಂಡಿಯಾದ ಸಾಧನೆ ತೋರುವುದಕ್ಕೆ. ಆದರೆ, ತಾಪ್ಸಿ ಪನ್ನು ವ್ಯಕ್ತಿಗೆ ಕಿರುಕುಳ ನೀಡಬಹುದೇ? ಅದೇ ಕಬಿರ್​ ಸಿಂಗ್​ ಚಿತ್ರದಲ್ಲಿ ಹುಡುಗಿಯ ಕಪಾಳಕ್ಕೆ ಬಾರಿಸುವುದು ತಪ್ಪಾದರೆ, ವ್ಯಕ್ತಿಗೆ ಕಿರುಕುಳ ನೀಡುವುದು ಅಪರಾಧ ಎಂದು ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.

ಆಗಸ್ಟ್​ 15ಕ್ಕೆ ಚಿತ್ರ ಬಿಡುಗಡೆ
ಮೊದಲ ಬಾರಿಗೆ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಸ್ಯಾಟಲೈಟ್​ ಇಳಿಸಿದ ಭಾರತದ ಸಾಧನೆ ಆಧಾರಿತ ಚಿತ್ರವೇ ‘ಮಿಷನ್​ ಮಂಗಲ್​’. ಚಿತ್ರವನ್ನು ಜಗನ್​ ಶಕ್ರಿ ನಿರ್ದೇಶನ ಮಾಡಿದ್ದು, ನಟ ಅಕ್ಷಯ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ತಾಪ್ಸಿ ಪನ್ನು, ವಿದ್ಯಾ ಬಾಲನ್​, ಸೋನಾಕ್ಷಿ ಸಿನ್ಹಾ, ಕೀರ್ತಿ ಕುಲ್ಹಾರಿ ಹಾಗೂ ಶರ್ಮಾನ್​ ಜೋಶಿ ಮುಂತಾದವರ ಬಹುತಾರಗಣ ಇದೆ. ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವದಂದು ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

One Reply to “VIDEO| ವ್ಯಕ್ತಿಯ ಗುಪ್ತಾಂಗ ಸ್ಪರ್ಶಿಸಿ ಟ್ರೋಲ್​ಗೆ ಒಳಗಾದ ತಾಪ್ಸಿ ಪನ್ನು: ಇದೇ ರೀತಿ ಪುರುಷರು ಮಾಡಿದ್ರೆ ಸುಮ್ಮನಾಗ್ತಿದ್ರಾ ಎಂದು ಆಕ್ರೋಶ”

  1. ಅಯ್ಯೋ ಪಾಪ > ಯಾವುದನ್ನು ಹಿಡಿದುಕೊಳ್ಳಬೇಕೆಂಬುದು ತೋರದೇ ಅದನ್ನು ಹಿಡಿದುಕೊಂಡು ಬಿಟ್ಟಿದ್ದಾಳೇನೊ? ಹಿಡಿಸಿಕೊಂಡವನ ಗತಿ ಏನಾಗಿರಬಹುದು?

Leave a Reply

Your email address will not be published. Required fields are marked *