ಡೇಟಿಂಗ್​ ಬಗ್ಗೆ ಬಾಯ್ಬಿಟ್ಟ ಬಾಲಿವುಡ್​ ಬ್ಯೂಟಿ ತಾಪ್ಸಿ ಪನ್ನು: ಮಗು ಬೇಕೆಂದಾಗ ಮದುವೆ ಆಗುತ್ತೇನೆಂದ ನಟಿ!

ಮುಂಬೈ: ತನ್ನ ನಟನಾ ಸಾಮರ್ಥ್ಯದಿಂದ ಮಾತ್ರವಲ್ಲದೇ ಸಿನಿಮಾಗಳ ಆಯ್ಕೆಯಲ್ಲಿಯೂ ಭಿನ್ನವೆನಿಸಿಕೊಂಡಿರುವ ನಟಿ ತಾಪ್ಸಿ ಪನ್ನು ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಬಹಿರಂಗಪಡಿಸಿದ್ದಾರೆ. ವಿಶೇಷವೆಂದರೆ ತಮ್ಮ ಪ್ರಿಯಕರನ ಬಗ್ಗೆ ಹೇಳುತ್ತಲೇ ಟ್ರೋಲಿಗರಿಗೆ ತಿರುಗೇಟನ್ನು ನೀಡಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಡೇಟಿಂಗ್​ ಬಗ್ಗೆ ಮಾತನಾಡಿರುವ ತಾಪ್ಸಿ, ನಾನಿನ್ನೂ ಮದುವೆಯಾಗಿಲ್ಲ. ನನ್ನ ಜೀವನದ ಬಗ್ಗೆ ನಿಜವಾದ ಆಸಕ್ತಿ ಹೊಂದಿರುವ ಜನರು ನನ್ನ ಮದುವೆ ಬಗ್ಗೆ ಗಾಸಿಪ್​ ಮಾಡಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ಪ್ರವೇಶ ನೀಡುವ ವ್ಯಕ್ತಿ ಜನರಿಗೆ ಕುತೂಹಲವಿರುವಂತಹ ವೃತ್ತಿಯಲ್ಲಿಲ್ಲ. ಅವರು ನಟನೂ ಅಲ್ಲ. ಕ್ರಿಕೆಟಿಗನೂ ಅಲ್ಲ. ನಮ್ಮ ಸುತ್ತಲೂ ಇಲ್ಲ ಎಂದು ಹೇಳಿದ್ದಾರೆ.

ಮದುವೆ ಬಗ್ಗೆಯೂ ಮಾತನಾಡಿರುವ ತಾಪ್ಸಿ, ಮಗು ಬೇಕೆಂದು ಅನಿಸಿದಾಗ ಮದುವೆ ಆಗುತ್ತೇನೆಂದು ಹೇಳಿದ್ದಾರೆ. ಅಲ್ಲದೆ, ತನ್ನ ಕಲ್ಪನೆಯ ಮದುವೆ ಕುರಿತು ಅದು ಒಂದು ದಿನದ ಸಂಭ್ರಮಾಚರಣೆ ಆಗಿರಬೇಕು. ಆಪ್ತರು ಮತ್ತು ಕುಟುಂಬ ವರ್ಗದವರು ಮಾತ್ರ ಇರಬೇಕೆಂದು ಇಚ್ಚೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ವಿಚಾರವಾಗಿ ಬಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ನಟ ಅಕ್ಷಯ್​ ಕುಮಾರ್​ ಅಭಿನಯದ ಮಿಷನ್​ ಮಂಗಲ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ತಾಪ್ಸಿ ನಟಿಸಿದ್ದಾರೆ. (ಏಜೆನ್ಸೀಸ್​)

One Reply to “ಡೇಟಿಂಗ್​ ಬಗ್ಗೆ ಬಾಯ್ಬಿಟ್ಟ ಬಾಲಿವುಡ್​ ಬ್ಯೂಟಿ ತಾಪ್ಸಿ ಪನ್ನು: ಮಗು ಬೇಕೆಂದಾಗ ಮದುವೆ ಆಗುತ್ತೇನೆಂದ ನಟಿ!”

  1. My such people what is the information they are going to deliver to our society will it help our youth and is it required??
    Let them not be any kind of role model to follow the foolish ideas for marriage .
    Wrong signal passed about marriage

Leave a Reply

Your email address will not be published. Required fields are marked *