More

  ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ಇಂದು ಬಾಂಗ್ಲಾ ಸವಾಲು; ಸೆಮೀಸ್​ ಸನಿಹ ತಲುಪುವ ತವಕ…

  ನಾರ್ತ್​ಸೌಂಡ್​: ಆಲ್ರೌಂಡ್​ ನಿರ್ವಹಣೆ ತೋರುವ ಮೂಲಕ ಅಫ್ಘಾನಿಸ್ತಾನ ಎದುರು ಸುಲಭ ಗೆಲುವು ದಾಖಲಿಸಿರುವ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​-8 ಹಂತದ ತನ್ನ 2ನೇ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಗೆಲುವಿನ ಓಟವನ್ನು ಮುಂದುವರಿಸುವ ಮೂಲಕ ಸೆಮಿಫೈನಲ್​ ಸನಿಹ ತಲುಪುವುದು ರೋಹಿತ್​ ಶರ್ಮ ಬಳಗದ ಗುರಿಯಾಗಿದೆ.

  ವಿಶ್ವ ನಂ. 1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಆ್ಘನ್​ ವಿರುದ್ಧ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾಗಿದ್ದರು. ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದರು. ಆದರೆ ಅಗ್ರ ಕ್ರಮಾಂಕದ ವೈಲ್ಯ ಭಾರತಕ್ಕೆ ಹಿನ್ನಡೆ ತಂದಿತ್ತು. ಭಾರತದ ಬೌಲರ್​ಗಳು ಪ್ರತಿ ಪಂದ್ಯದಲ್ಲೂ ಬೆನ್ನೆಲುಬಾಗಿ ನಿಂತಿದ್ದು, ಅಗ್ರ ಕ್ರಮಾಂಕದಿಂದಲೂ ಉತ್ತಮ ಕೊಡುಗೆಯ ಅಗತ್ಯವಿದೆ. ಸೂಪರ್​-8ನ ಮೊದಲ ಪಂದ್ಯದಲ್ಲಿ ಆಸೀಸ್​ ವಿರುದ್ಧ ಸೋತಿರುವ ಬಾಂಗ್ಲಾಕ್ಕೂ ಬ್ಯಾಟಿಂಗ್​ ವಿಭಾಗವೇ ದೊಡ್ಡ ಸಮಸ್ಯೆಯಾಗಿದೆ. ಬಾಂಗ್ಲಾ ಪಾಲಿಗೂ ಜಸ್​ಪ್ರೀತ್​ ಬುಮ್ರಾ ಪ್ರಮುಖ ಸವಾಲಾಗಲಿದ್ದಾರೆ.

  11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವ ಮತ್ತು 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಜಯಿಸುವ ಹಂಬಲದಲ್ಲಿರುವ ಭಾರತ ತಂಡ ಈ ಪಂದ್ಯ ಗೆದ್ದರೆ ಸೆಮಿಫೈನಲ್​ ಪ್ರವೇಶ ಬಹುತೇಕ ಖಚಿತವೆನಿಸಲಿದೆ. ಭಾರತ ತಂಡ ಸೂಪರ್​-8ನ ಸತತ 2ನೇ ಪಂದ್ಯದಲ್ಲೂ ಗೆದ್ದರೆ, ಆಗ ಆ್ಘನ್​ ತಂಡ ಆಸೀಸ್​, ಬಾಂಗ್ಲಾಗೆ ಆಘಾತ ನೀಡದಿದ್ದರೆ ರೋಹಿತ್​ ಶರ್ಮ ಪಡೆ ಕೊನೇ ಪಂದ್ಯದಲ್ಲಿ (ಜೂ.24) ಕಾಂಗರೂಗಳ ಎದುರು ಸೋತರೂ ಗ್ರೂಪ್​-1ರಿಂದ 2ನೇ ಸ್ಥಾನಿಯಾಗಿ ಸೆಮಿೈನಲ್​ಗೇರಲಿದೆ.

  ಟೀಮ್​ ನ್ಯೂಸ್​
  ಭಾರತ: ರೋಹಿತ್​ ಶರ್ಮ&ವಿರಾಟ್​ ಕೊಹ್ಲಿ ಆರಂಭಿಕರಾಗಿ ಭಾರತಕ್ಕೆ ಉತ್ತಮ ಕೊಡುಗೆ ನೀಡುತ್ತಿಲ್ಲ. ಇದರ ಹೊರತಾಗಿಯೂ ಟೂರ್ನಿಯ ನಡುವೆ ಭಾರತ ಆರಂಭಿಕ ಜೋಡಿಯನ್ನು ಬದಲಾಯಿಸುವುದು ಅನುಮಾನವೆನಿಸಿದೆ. ಶಿವಂ ದುಬೆ ಕೂಡ ಐಪಿಎಲ್​ನ ಸ್ಫೋಟಕ ಆಟವನ್ನು ವಿಶ್ವಕಪ್​ನಲ್ಲಿ ಪುನರಾವರ್ತಿಸಲು ವಿಫಲರಾಗಿದ್ದಾರೆ. ಅವರ ವೈಲ್ಯ ಮುಂದುವರಿದರೆ ಸಂಜು ಸ್ಯಾಮ್ಸನ್​ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ, ಈ ಪಂದ್ಯದಲ್ಲಿ ಭಾರತದ ಗೆಲುವಿನ ಕಾಂಬಿನೇಷನ್​ ಬದಲಾಗುವ ನಿರೀಕ್ಷೆ ಇಲ್ಲ.
  ಬಾಂಗ್ಲಾದೇಶ: ಶಕೀಬ್​ ಅಲ್​ ಹಸನ್​, ನಾಯಕ ನಜ್ಮುಲ್​ ಶಾಂಟೊ ಮತ್ತು ಹೌಹಿದ್​ ಹೃದಯ್​ ಹೊರತಾಗಿ ಬಾಂಗ್ಲಾದ ಇತರ ಬ್ಯಾಟರ್​ಗಳ ನಿರ್ವಹಣೆ ನಿರಾಶಾದಾಯಕವಾಗಿದೆ. ಬೌಲಿಂಗ್​ನಲ್ಲಿ ವೇಗಿ ಮುಸ್ತಾಫಿಜುರ್​ ಪ್ರಮುಖ ಅಸ್ತ್ರವೆನಿಸಿದ್ದು, ಯುವ ಲೆಗ್​ ಸ್ಪಿನ್ನರ್​ ರಿಷದ್​ ಹುಸೇನ್​ಗೆ ಇನ್ನಷ್ಟು ಬೆಂಬಲದ ಅಗತ್ಯವಿದೆ. ವೇಗಿ ಟಸ್ಕಿನ್​ ಅಹ್ಮದ್​ ವೈಲ್ಯ ತಂಡಕ್ಕೆ ಹಿನ್ನಡೆ ತಂದಿದೆ.

  See also  ಹಾರ್ದಿಕ್​ ಪಾಂಡ್ಯರ ಆ ವರ್ತನೆ ನನಗೆ ಇಷ್ಟವಾಗಲಿಲ್ಲ! ಕಹಿ ಘಟನೆ ನೆನಪಿಸಿಕೊಂಡ ಮೊಹಮ್ಮದ್​ ಶಮಿ

  ಭಾರತಕ್ಕೆ ಎಚ್ಚರಿಕೆ ಅಗತ್ಯ
  ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡ ಬಾಂಗ್ಲಾ ಎದುರು ಬಲಿಷ್ಠ ದಾಖಲೆ ಹೊಂದಿದೆ. ಆದರೂ ಐಸಿಸಿ ಟೂರ್ನಿಯಲ್ಲಿ ಭಾರತ, ಎದುರಾಳಿಯನ್ನು ಲುವಾಗಿ ಪರಿಗಣಿಸಲು ಅವಕಾಶವಿಲ್ಲ. 2007ರಲ್ಲಿ ಕೆರಿಬಿಯನ್​ ನೆಲದಲ್ಲೇ ನಡೆದ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾ ಎದುರು ಆಘಾತ ಎದುರಿಸಿ ಭಾರತ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಆಗ ತಂಡದ ನಾಯಕರಾಗಿದ್ದ ರಾಹುಲ್​ ದ್ರಾವಿಡ್​ ಈಗ ಕೋಚ್​ ಆಗಿದ್ದಾರೆ. ಬಾಂಗ್ಲಾ ಎದುರು 2016ರ ಟಿ20 ವಿಶ್ವಕಪ್​ನಲ್ಲಿ ಕೇವಲ 1 ರನ್​ನಿಂದ ಮತ್ತು 2022ರ ಟಿ20 ವಿಶ್ವಕಪ್​ನಲ್ಲಿ 5 ರನ್​ಗಳಿಂದ ಗೆದ್ದಿತ್ತು. ಹೀಗಾಗಿ ಸೆಮೀಸ್​ ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಬಾಂಗ್ಲಾ ಸವಾಲು ಹಿಮ್ಮೆಟ್ಟಿಸುವುದು ಅಗತ್ಯವಾಗಿದೆ.

  *ಮುಖಾಮುಖಿ: 13
  ಭಾರತ: 12
  ಬಾಂಗ್ಲಾದೇಶ: 1
  *ವಿಶ್ವಕಪ್​ನಲ್ಲಿ: 4
  ಭಾರತ: 4
  ಬಾಂಗ್ಲಾದೇಶ: 0
  *ಆರಂಭ: ರಾತ್ರಿ 8.00
  *ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ಸ್ಟಾರ್​.

  ಪಿಚ್​ ರಿಪೋರ್ಟ್​
  ವಿವ್​ ರಿಚರ್ಡ್ಸ್​ ಸ್ಟೇಡಿಯಂನಲ್ಲಿ ಇದುವರೆಗೆ ಟೂರ್ನಿಯ 6 ಪಂದ್ಯಗಳು ನಡೆದಿದ್ದು, ಈ ಪೈಕಿ 4ರಲ್ಲಿ ಚೇಸಿಂಗ್​ ಮಾಡಿದ ತಂಡವೇ ಜಯಿಸಿದೆ. 5 ಪಂದ್ಯಗಳಲ್ಲಿ ಟಾಸ್​ ಗೆದ್ದ ನಾಯಕ ಫೀಲ್ಡಿಂಗ್​ ಆಯ್ದುಕೊಂಡಿದ್ದಾರೆ. ಸ್ಪಿನ್​&ವೇಗ ಎರಡಕ್ಕೂ ನೆರವಾಗುವ ಪಿಚ್​ ಇದಾಗಿದ್ದು, ದಣ ಆಫ್ರಿಕಾ ತಂಡ ಅಮೆರಿಕ ವಿರುದ್ಧ 194 ರನ್​ ಗಳಿಸಿದ್ದು ಟೂರ್ನಿಯಲ್ಲಿ ತಂಡವೊಂದು ಇಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.

  ಮಳೆ ಅಡಚಣೆ ಭೀತಿ
  ನಾರ್ತ್​ಸೌಂಡ್​ನಲ್ಲೇ ಶುಕ್ರವಾರ (ಸ್ಥಳಿಯ ಕಾಲಮಾನ ಗುರುವಾರ ರಾತ್ರಿ) ಆಸೀಸ್​&ಬಾಂಗ್ಲಾ ನಡುವೆ ನಡೆದ ಪಂದ್ಯ ಮಳೆ ಅಡಚಣೆ ಎದುರಿಸಿತ್ತು. ಅಂತಿಮವಾಗಿ ಡಕ್ವರ್ತ್​&ಲೂಯಿಸ್​ ನಿಯಮದನ್ವಯ ಲಿತಾಂಶ ನಿರ್ಧಾರವಾಗಿತ್ತು. ಭಾರತ&ಬಾಂಗ್ಲಾ ಪಂದ್ಯ ಸ್ಥಳಿಯ ಕಾಲಮಾನ ಪ್ರಕಾರ ಬೆಳಗ್ಗೆ ನಡೆಯುತ್ತಿದ್ದರೂ, ಮಳೆ ಅಡಚಣೆ ಭೀತಿ ಶೇ.20ರಷ್ಟಿದೆ.

  17 ಮಂದಿಗೆ 60 ರೂಮ್ಸ್,​ ಪಕ್ಕದಲ್ಲಿ ಹೆಂಡತಿಯರು! ಪಾಕಿಸ್ತಾನದ ಹೀನಾಯ ಸೋಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts