ಮಸ್ಕತ್: ಆಲ್ರೌಂಡ್ ನಿರ್ವಹಣೆ ತೋರಿದ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸತತ 3 ಗೆಲುವು ದಾಖಲಿಸುವ ಮೂಲಕ ಅಜೇಯವಾಗಿ ಸೂಪರ್-12 ಹಂತಕ್ಕೇರಿದೆ. ಓಮನ್ ವಿರುದ್ಧ ಗುರುವಾರ ನಡೆದ ಮೊದಲ ಸುತ್ತಿನ ತನ್ನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ 8 ವಿಕೆಟ್‌ಗಳಿಂದ ಜಯಿಸಿತು. ಈ ಮೂಲಕ ಬಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ ಸ್ಕಾಟ್ಲೆಂಡ್, ಸೂಪರ್-12ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಒಳಗೊಂಡ ಗ್ರೂಪ್-2ರಲ್ಲಿ ಸ್ಥಾನ ಸಂಪಾದಿಸಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಓಮನ್ ತಂಡ ಭರ್ತಿ 20 ಓವರ್‌ಗಳಲ್ಲಿ 122 ರನ್‌ಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 123 ರನ್ ಗಳಿಸಿ ಜಯಿಸಿತು.
ಓಮನ್: 20 ಓವರ್‌ಗಳಲ್ಲಿ 122 (ಅಕಿಬ್ ಐಲಾಸ್ 37, ಮೊಹಮದ್ ನದೀಮ್ 25, ಜೀಶಾನ್ ಮಕ್ಸೂದ್ 34, ಜೋಸ್ ಡೇವೆ 25ಕ್ಕೆ 3, ಸ್ಯಾನ್ ಶರೀಫ್ 25ಕ್ಕೆ 2, ಮಿವೆಲ್ ಲೀಸ್ಕ್ 13ಕ್ಕೆ2). ಸ್ಕಾಟ್ಲೆಂಡ್: 17 ಓವರ್‌ಗಳಲ್ಲಿ 2 ವಿಕೆಟ್‌ಗೆ 123 (ಮುನ್ಸೆ 20, ಕೋಯೆಟ್ಜರ್ 41, ಕ್ರಾಸ್ 26*, ಬೆರಿಂಗ್ಟನ್ 31*, ಫಯಜ್ 26ಕ್ಕೆ 1).
Scotland's blazing form continued as they booked their place in the Super 12 in style 💥#OMNvSCO report 👇 #T20WorldCup https://t.co/qdA43CaM3w
— ICC (@ICC) October 21, 2021