ಟಿ-20 ಮೊದಲ ಪಂದ್ಯ: ಭಾರತಕ್ಕೆ 110 ರನ್​ಗಳ ಗುರಿ ನೀಡಿದ ವೆಸ್ಟ್​ಇಂಡೀಸ್​

ನವದೆಹಲಿ: ಕಲ್ಕತಾದ ಈಡನ್​ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್​ಇಂಡೀಸ್​ ಭಾರತಕ್ಕೆ 110ರನ್​ಗಳ ಗುರಿ ನೀಡಿದೆ.

ಟಾಸ್​ಗೆದ್ದ ಭಾರತ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ವೆಸ್ಟ್ಇಂಡೀಸ್​ ತನ್ನ ಎಂಟು ವಿಕೆಟ್​ ಕಳೆದುಕೊಂಡು 109ರನ್​ ಗಳಿಸಿದೆ. ಶಾಯ್ ಹೋಪ್ 14, ದಿನೇಶ್ ರಾಮ್‌ದಿನ್ 2, ಶಿಮ್ರಾನ್​ ಹ್ಯಾಟ್ಮೇರ್​ 10, ಕೀರಾನ್​ ಪೊಲ್ಲಾರ್ಡ್​ 14, ರೋವ್‌ಮ್ಯಾನ್ ಪೊವೆಲ್ 4, ನಾಯಕ ಕಾರ್ಲೋಸ್ ಬ್ರಾತ್‌ವೇಟ್ 4, ಡರ್ರೆನ್​ ಬ್ರಾವೋ 5, ಫಾಬಿಯಾನ್‌ ಆಲನ್‌ 27, ಕಿಮೋ ಪೌಲ್​ ಅಜೇಯ 15 ಹಾಗೂ ಖೇರಿ ವೈರೆ ಅಜೇಯ 9 ರನ್​ ಗಳಿಸಿದರು.

ಭಾರತದ ಕುಲ್‌ದೀಪ್ ಯಾದವ್ ಮೂರು (13/3), ಕೃಣಾಲ್ ಪಾಂಡ್ಯ(15/1), ಖಲೀಲ್ ಅಹ್ಮದ್(16/1), ಜಸ್ಪ್ರೀತ್ ಬುಮ್ರಾ (27/1), ಉಮೇಶ್ ಯಾದವ್ (36/1) ತಲಾ ಒಂದು ವಿಕೆಟ್​ ಪಡೆದಿದ್ದಾರೆ.