ಮೊದಲ ಟಿ20: ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾಗೆ 5 ವಿಕೆಟ್​ ಗೆಲುವು

ಕೋಲ್ಕತ: ಈಡನ್​ಗಾರ್ಡನ್​ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್​ಇಂಡೀಸ್​ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಮೊದಲು ಬ್ಯಾಟ್ ಮಾಡಿದ ವೆಸ್ಟ್​ಇಂಡೀಸ್​ ಭಾರತಕ್ಕೆ 110 ರನ್​ಗಳ ಗುರಿ ನೀಡಿತ್ತು. ಭಾರತದ ಪರ ಆರ್​.ಜಿ.ಶರ್ಮಾ 6, ಶಿಖರ್​ಧವನ್​ 3, ರಿಷಬ್​ ಪಂತ್​ 1, ಎಲ್​.ರಾಹುಲ್​ 16, ಮನೀಶ್​ ಪಾಂಡೆ 19ರನ್​ಗಳನ್ನು ಗಳಿಸಿ ಔಟ್​ ಆದರು. ನಂತರ ರಕ್ಷಣಾತ್ಮಕ ಆಟವಾಡಿದ ದಿನೇಶ್​ ಕಾರ್ತೀಕ್​ 31, ಕೃನಾಲ್​ ಪಾಂಡ್ಯ 21 ರನ್​ಗಳಿಸಿ ಪಂದ್ಯದ ಗೆಲುವಿಗೆ ಕಾರಣವಾದರು. ಅಂತೂ 17.5 ಓವರ್​ಗಳಲ್ಲಿ ಭಾರತ ಗೆಲುವು ಸಾಧಿಸಿತು.

ವೆಸ್ಟ್​ ಇಂಡೀಸ್​ ಪರ ಒಶಾನ್‌ ಥಾಮಸ್‌, ಬ್ರಾಥ್​ವೇಟ್​ ತಲಾ 2 ವಿಕೆಟ್ ಪಡೆದರು.