ಇಂದಿನಿಂದ ಮರುಡೇಶ್ವರ ಜಾತ್ರಾ ಮಹೋತ್ಸವ


ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದ ಮರುಡೇಶ್ವರ ಸ್ವಾಮಿ ಜಾತ್ರೋತ್ಸವ ಮಾ. 26ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.
ಐತಿಹಾಸಿಕ ಪುಣ್ಯ ಕ್ಷೇತ್ರವಾಗಿರುವ ಮರುಡೇಶ್ವರ ಸ್ವಾಮಿ ದೇವಾಲಯದಲ್ಲಿ ಅಂದು ಮಧ್ಯಾಹ್ನ 1ಗಂಟೆಗೆ ಕೊಂಡೋತ್ಸವ, 27ರಂದು ಮರುಡೇಶ್ವರ ಸ್ವಾಮಿ ಜತೆಗೆ ಗಣೇಶ, ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ, 28ರಂದು ರಾತ್ರಿ ತೆಪ್ಪೋತ್ಸವ ಹಾಗೂ 29 ರಂದು ಬೆಳಗ್ಗೆ ಕುರ್ಜಿನ ಮೆರವಣಿಗೆ ನಡೆಯಲಿದೆ.