ಬಣ್ಣಾರಿ ಮಾರಿಯಮ್ಮ ದೇಗುಲದಲ್ಲಿ ಕೊಂಡೋತ್ಸವ

ತಿ.ನರಸೀಪುರ: ಪಟ್ಟಣದ ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ಶ್ರೀಬಣ್ಣಾರಿ ಮಾರಿಯಮ್ಮನವರ 74 ನೇ ವರ್ಷದ ಮಹೋತ್ಸವ ಅಂಗವಾಗಿ ಮಂಗಳವಾರ ಮುಂಜಾನೆ ದೇವಾಲಯದ ಮುಂಭಾಗದಲ್ಲಿ ಕೊಂಡೋತ್ಸವ ನಡೆಯಿತು.

ಉತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ, ಪೂಜೆ, ಅರ್ಚನೆಗಳು ಜರುಗಿದವು ಬಳಿಕ ಕೋಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಿಂದ ಹರಕೆ ಹೊತ್ತ ಸಾವಿರಾರು ಭಕ್ತರು ಕೊಂಡ ಹಾಯ್ದರು. ಮಂಗಳವಾರ ಮಧ್ಯಾಹ್ನ ಭಕ್ತರು ತಂಬಿಟ್ಟಿನ ಅರತಿ ತಂದು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಉತ್ಸವದ ಮುನ್ನಾ ದಿನ ತ್ರಿವೇಣಿ ಸಂಗಮದಿಂದ ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ಸಪ್ತ ಕನ್ನಿ ದೇವತೆಗಳ ಮಹೋತ್ಸವ ಜರುಗಿತು. ತೀರ್ಥಕೊಡ ಉತ್ಸವ, ಗಣಪತಿ ಹೋಮ, ಶ್ರೀಶಕ್ತಿಯ ಆಹ್ವಾನ, ಕೊಂಡಕ್ಕೆ ಅಗ್ನಿ ಸ್ಪರ್ಶ, ಮಹಾಮಂಗಳಾರತಿ ನಡೆದವು.

Leave a Reply

Your email address will not be published. Required fields are marked *