ಸಿರಿಯಾದಲ್ಲಿ ಐಎಸ್​ ಉಗ್ರರ ಆತ್ಮಾಹುತಿ ಬಾಂಬ್​ ದಾಳಿ: 215ಕ್ಕೂ ಹೆಚ್ಚು ಜನ ಸಾವು

ಸಿರಿಯಾ: ಪಶ್ಚಿಮ ಸಿರಿಯಾದ ಸರ್ಕಾರಿ ಸ್ಥಳದ ಮೇಲೆ ಐಎಸ್​ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದು 215ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವರ್ಷಗಳ ಈಚೆಗೆ ಇಷ್ಟೊಂದು ಮಾರಣಾಂತಿಕ ದಾಳಿ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿರಿಯಾದ ಪ್ರಾಂತೀಯ ರಾಜಧಾನಿ ಸ್ವೀಡಾದಲ್ಲಿ ಬಾಂಬ್​ ದಾಳಿಯಾಗಿದ್ದು 215 ಜನ ಮೃತಪಟ್ಟು, 75 ಐಎಸ್​ ಉಗ್ರರು ಸೇರಿ 182 ಜನರು ಗಂಭೀರ ಗಾಯಗೊಂಡಿದ್ದಾರೆ.

ಜಿಹಾದಿಗಳು ಏಕಕಾಲದಲ್ಲಿ ಸ್ವೀಡಾದ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ ಬಾಂಬ್​ ದಾಳಿ ನಡೆಸಿದ್ದು ಸರ್ಕಾರಿ ಪಡೆಗಳ ವಿರುದ್ಧ ಘರ್ಷಣೆಗೆ ಇಳಿದರು. ನಗರದ ಎರಡು ಕಡೆಗಳಲ್ಲಿ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ಮಾಡಿದ್ದಾರೆ. ಒಂದು ಮಾರ್ಕೆಟ್​ ಬಳಿ ಹಾಗೂ ಮತ್ತೊಂದು ಇನ್ನೊಂದು ಜಿಲ್ಲೆಯ ಸಮೀಪ ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.