More

    ವಿಚಾರ ಗೋಷ್ಠಿ, ಗ್ರಂಥ ಬಿಡುಗಡೆ ನಾಳೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಭವನದಲ್ಲಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಮಹಾರಾಷ್ಟ್ರದ ಅಕ್ಕನ ಅರಿವು-ವಚನ ಅಧ್ಯಯನ ವೇದಿಕೆ ವತಿಯಿಂದ ಮೇ 27ರಂದು ಬೆಳಗ್ಗೆ 10 ಗಂಟೆಗೆ ‘ಶರಣರು ಮತ್ತು ಜಾಗತಿಕ ದಾರ್ಶನಿಕರು’ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಗೋಷ್ಠಿ, ಅನುಭಾವ ಗ್ರಂಥ ಬಿಡುಗಡೆ ಏರ್ಪಡಿಸಲಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಹೂಗಾರ ತಿಳಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂಜಿಲಾಂಡ್ ಏಷಿಯಾ ಫೆಸಿಫಿಕ್‌ನ ಬಸವ ಸಮಿತಿ ಅಧ್ಯಕ್ಷ ಡಾ. ಲಿಂಗಣ್ಣಾ ಕಲಬುರ್ಗಿ ಆಶಯ ನುಡಿಗಳನ್ನಾಡುವರು. ಸಿಡ್ನಿಯ ಬಸವ ಸಮಿತಿ ಅಧ್ಯಕ್ಷ ಸಂಗಮೇಶ ಸಾಲಿಮಠ ಶುಭ ಸಂದೇಶ ಸಾರುವರು. ಡಾ. ವೀರಣ್ಣ ರಾಜೂರ ಗ್ರಂಥ ಬಿಡುಗಡೆ ಮಾಡುವರು. ಡಾ. ಶಶಿಕಾಂತ ಪಟ್ಟಣ ವಿಚಾರ ಮಂಡನೆ ಮಾಡಲಿದ್ದು, ಡಾ. ವಿ.ಐ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
    ಪ್ರಾಚಾರ್ಯ ಡಾ. ನೀಲಕ್ಕಾ ಪಾಟೀಲ ಮಾತನಾಡಿ, ಕಾಲೇಜು 1973ರಲ್ಲಿ ಸ್ಥಾಪಿತಗೊಂಡು 2022ರಲ್ಲಿ ನ್ಯಾಕ್‌ನಿಂದ ಎ+ ಗ್ರೇಡ್ ಮಾನ್ಯತೆ ಹೊಂದಿದೆ. ಹತ್ತು ಹಲವಾರು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ ಶ್ರೇಷ್ಠತೆ ಹೊಂದಿದ ಗುಣಮಟ್ಟದ ಮಹಾವಿದ್ಯಾಲಯವಾಗಿದೆ ಎಂದರು.
    ಕರಣ ದೊಡವಾಡ, ಸಿ.ಎಸ್. ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts