ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ತಿಲಕ ಅಥವಾ ಪುಂಡ್ರಧಾರಣೆ ಒಂದು ಅತ್ಯಂತ ಪ್ರಾಚೀನ, ಪವಿತ್ರ ಹಾಗೂ ಶಾಸ್ತ್ರ ಸಮ್ಮತ ಸಂಪ್ರದಾಯವಾಗಿದೆ. ಇದು ಕೇವಲ ದೇಹದ ಅಲಂಕಾರವಲ್ಲ. ವ್ಯಕ್ತಿಯ ಧಾರ್ವಿುಕ ನಿಷ್ಠೆ, ಆಂತರಿಕ ಶುದ್ಧತೆ ಮತ್ತು ದೇವರ ಪರ ಸೇವೆಯ ಸಂಕೇತವೂ ಆಗಿದೆ. ವಿವಿಧ ಪುರಾಣಗಳು, ಧರ್ಮಸೂತ್ರಗಳು ಮತ್ತು ಸ್ಮೃತಿಗಳಲ್ಲಿ ತಿಲಕದ ಮಹತ್ವವನ್ನು ವಿಶದವಾಗಿ ವಿವರಿಸಲಾಗಿದೆ.
ತಿಲಕವೆಂದರೇನು?: ‘ತಿಲ’ ಎಂಬ ಸಂಸ್ಕೃತ ಪದವು ಚಿಹ್ನೆ ಅಥವಾ ಲಕ್ಷಣ ಎಂಬ ಅರ್ಥ ನೀಡುತ್ತದೆ. ಲಲಾಟ ಅಥವಾ ಶರೀರದ ನಿರ್ದಿಷ್ಟ ಅಂಗಗಳಲ್ಲಿ ಧರಿಸುವ ಚಂದನ, ವಿಭೂತಿ, ಕುಂಕುಮ, ಭಸ್ಮ, ಇತ್ಯಾದಿಗಳಿಂದ ಮಾಡಿದ ಚಿಹ್ನೆ ಇದಾಗಿರುತ್ತದೆ. ವೈಷ್ಣವ, ಶೈವ, ಶಾಕ್ತ ಇತ್ಯಾದಿ ಸಂಪ್ರದಾಯಗಳ ಪ್ರಕಾರ ತಿಲಕದ ರೂಪ, ಸ್ಥಳ, ಪದಾರ್ಥ ವಿಭಿನ್ನವಾಗಿರುತ್ತದೆ.
ತಿಲಕದ ಪ್ರಕಾರ-ದರ್ಶನ: ವೈಷ್ಣವ ಸಂಪ್ರದಾಯದಲ್ಲಿ ತಿಲಕದ ಸ್ವರೂಪ ಶ್ರೀನಾಮ, ವಿಷ್ಣುಪಾದ ಸಂಕೇತ, ತಿರುಮನ್, ಊರ್ಧ್ವಪುಂಡ್ರ- ಉಬ್ಬಿದ ‘ಉ’ ಆಕಾರ. ಉಪಯೋಗಿಸುವ ಪದಾರ್ಥ ಭಸ್ಮ ಅಥವಾ ವಿಭೂತಿ. ಅರ್ಥ ವೈರಾಗ್ಯ, ಶಾಂತಿ, ಶಿವಪಂಥ. ಶಾಕ್ತ ಸಂಪ್ರದಾಯದಲ್ಲಿ ತಿಲಕದ ಸ್ವರೂಪ, ರಕ್ತಬಿಂದು ಶಕ್ತಿನಾಮ ಅಥವಾ ಕುಂಕುಮ ಉಪಯೋಗಿಸುವ ಪದಾರ್ಥ ಯಜ್ಞ-ಹವನ, ಸಿಂಧೂರ, ಕುಂಕುಮ-ಅರಿಸಿನ. ಅರ್ಥ ಆತ್ಮಶಕ್ತಿ ಶಾಂತಿ. ಗೌಡೀಯ ಸಂಪ್ರದಾಯ, ಚಂದ್ರಕೋರೆಯ ತಿಲಕ, ಚಿತ್ ಮತ್ತು ಆನಂದದ ಪ್ರತೀಕ.
ತಿಲಕದ ಆಧ್ಯಾತ್ಮಿಕ ಪ್ರಯೋಜನಗಳು: ತಿಲಕವನ್ನು ಆಜ್ಞಾ ಚಕ್ರ ಸ್ಥಳದಲ್ಲಿ ಧರಿಸಲಾಗಿ ಅದರಿಂದ ಸಾತ್ವಿಕ ಶಕ್ತಿ ಪ್ರಚೋದಿತವಾಗುತ್ತದೆ. ವ್ಯಕ್ತಿಗೆ ದೇವ ಚಿಂತನೆ, ಭಕ್ತಿ ಭಾವ, ಶ್ರದ್ಧೆ ಇತ್ಯಾದಿಗಳು ಮನಸ್ಸಿನಲ್ಲಿ ಉದ್ದೀಪನಗೊಳ್ಳುತ್ತದೆ. ಶಾಸ್ತ್ರದ ಪ್ರಕಾರ ಲಲಾಟದ ಮಧ್ಯಭಾಗವು ‘ಇಂದ್ರಯುಗ್ಮ’ ಸ್ಥಳ. ಅಲ್ಲಿ, ತಿಲಕ ಧರಿಸುವುದು ಸೋಮತತ್ತ್ವದ ಹರಿವಿಗೆ ಸಹಕಾರಿ. ತಾತ್ವಿಕ ಸಂಕೇತ: ತಿಲಕವು ‘ಇಗೋ ನಾನು ದೇಹವಲ್ಲ, ಭಗವಂತನ ದಾಸನಾಗಿದ್ದೇನೆ’ ಎಂಬ ವ್ಯಕ್ತದ ಘೋಷಣೆಯಷ್ಟೆ. ಭಗವಂತನ ಅನುಗ್ರಹಕ್ಕಾಗಿ ನಾವು ತಯಾರಾಗಿದ್ದೇವೆ ಎಂಬ ಆತ್ಮ ಸಂಕಲ್ಪ. ಅಹಂಕಾರದ ತ್ಯಾಗ ಮತ್ತು ದೇವ ಭಕ್ತಿಯ ಪ್ರಾರಂಭ. ದಿನಚರ್ಯುಯಲ್ಲಿ ತಿಲಕವನ್ನು ಧರಿಸುವುದು ಸಂಪ್ರದಾಯ ಪಾಲನೆಯಲ್ಲದೆ ಭಕ್ತಿಯ ಅನುಭವವಾಗಿದೆ. ಶಾಸ್ತ್ರ ಸಮ್ಮತವಾದ ಈ ಚಿಹ್ನೆಯು ಇಂದಿನ ದಿನಮಾನದಲ್ಲಿಯೂ ಆಧ್ಯಾತ್ಮಿಕ ಚೇತನಕ್ಕೆ ದಾರಿಯಾಗಿದೆ. ದೇವೀದೇವತೆಯ ಅನುಗ್ರಹಪೂರ್ಣ ಚಿಹ್ನೆಯಾಗಿದೆ.
ತಿಲಕ ಮತ್ತು ಭಕ್ತಿ ಪರಂಪರೆ: ಮಧ್ವಾಚಾರ್ಯರು, ರಾಮಾನುಜರು, ಶಂಕರಾಚಾರ್ಯರು ಎಲ್ಲರಿಗೂ ತಿಲಕ ಧರಿಸುವ ವಿಶಿಷ್ಟ ಸಂಪ್ರದಾಯವಿದೆ. ತಿಲಕವು ‘ನಾನು ಯಾರ ಅನುಯಾಯಿ?’ ‘ನನ್ನ ಜೀವನದ ಧ್ಯೇಯವೇನು?’ ಎಂಬುದರ ವ್ಯಕ್ತೀಕರಣ.
ಯೋಗದೃಷ್ಟಿಯಿಂದ ತಿಲಕದ ಮಹತ್ವ: ತಿಲಕವನ್ನು ಭ್ರೂಮಧ್ಯೆ ಅಂದರೆ ಹುಬ್ಬುಗಳ ಧರಿಸಲಾಗುತ್ತದೆ. ಇದು ಮಾನಸಿಕ ಶಕ್ತಿಯ ಕೇಂದ್ರ. ಈ ಸ್ಥಳದಲ್ಲಿ ತಿಲಕವನ್ನು ಧರಿಸುವುದು ಧ್ಯಾನ ಮಾನಸಿಕ ಏಕಾಗ್ರತೆಯ ಬೆಳವಣಿಗೆಗೆ ಸಹಾಯಕ. ಇದು ಆಂತರಿಕ ದೃಷ್ಟಿಯನ್ನು ಶುದ್ಧಗೊಳಿಸುತ್ತದೆ ಮತ್ತು ಆತ್ಮಾನುಭೂತಿ ಸಾಧನೆಯ ದಾರಿಯಾಗಿದೆ. ತಪಸ್ಸು ಮತ್ತು ಸಂಸ್ಕಾರ: ತಿಲಕ ಧಾರಣೆ ಯೋಗಿಯ ತಪಸ್ಸಿನ ಭಾಗವಾಗಿದ್ದು ತಾನೊಬ್ಬ ಸಾಧಕನಾಗಿರುವುದನ್ನು ಪ್ರತಿಪಾದಿಸುತ್ತದೆ ಎಂಬ ನಂಬಿಕೆಯಿದೆ. ನಾಸಾ ಅಧ್ಯಯನ ಪ್ರಕಾರ ಭ್ರೂಮಧ್ಯ ಪ್ರದೇಶವು ಇತರ ಅಂಗಾಂಗಗಳ ಕ್ರಿಯೆಯ ನಿಯಂತ್ರಣದಲ್ಲಿದೆ.
ವೈಜ್ಞಾನಿಕ ದೃಷ್ಟಿಕೋನ: ನರ್ಸ್ ಎಂಡೋಕ್ರೖೆನ್ ಸಂಪರ್ಕ: ತಿಲಕದ ಸ್ಥಳ ಭ್ರೂಮಧ್ಯ. ಪಿಟ್ಯೂಟರಿ ಗ್ರಂಥಿ ಮತ್ತು ಪೈನಿಯಲ್ ಗ್ರಂಥಿಯ ಬಳಿಯಲ್ಲಿದೆ. ಈ ಗ್ರಂಥಿಗಳು ಮಾನಸಿಕ ಶಾಂತಿ, ನಿದ್ರೆ, ನೆನಪಿನ ಶಕ್ತಿ ಶಾರೀರಿಕ ಜವಾಬ್ದಾರಿಯನ್ನು ನಿಯಂತ್ರಿಸುತ್ತವೆ.
ತಂಪು ಹಾಗೂ ತೂಕದ ಸಮತೋಲನ: ಚಂದನ ಅಥವಾ ಗುಲಾಬಿ ನೀರಿನಂತಹ ತಿಲಕವು ತಲೆ ತಣ್ಣಗೆ ಇಡುವ ಕಾರ್ಯ ಮಾಡುತ್ತದೆ. ಇದು ಮನಸ್ಸಿನ ಒತ್ತಡ ನಿವಾರಣೆಗೆ ಸಹಾಯಕ.
ಬುದ್ಧಿಗಮ್ಯ ಪ್ರಭಾವ: ಸ್ನಾಯು ತಂತುಗಳ ತುದಿಯಲ್ಲಿ ನಿರಂತರ ಸ್ಪರ್ಶ ಉಂಟಾದರೆ, ಆ ಪ್ರದೇಶದ ಅರಿವು ಜಾಗೃತ ವಾಗುತ್ತದೆ. ತಿಲಕವು ಪ್ರತಿದಿನ ಏಕಾಗ್ರತೆಯ ಪ್ರತೀಕವಾಗಿ ರುವುದರಿಂದ ಧ್ಯಾನ ಸಹಿತ ಕ್ರಿಯೆಯಾಗಿದೆ. ತಿಲಕ ಧಾರಣೆ ಕೇವಲ ಧಾರ್ವಿುಕ ಚಿಹ್ನೆಯಲ್ಲ, ಇದು ಯೋಗ, ಧರ್ಮ ವಿಜ್ಞಾನ ಮತ್ತು ಮಾನಸಿಕ ಶುದ್ಧತೆಯ ಒಂದು ಸಮಗ್ರ ಸಂಕೇತ. ಇದು ಭಾರತೀಯ ಸಂಸ್ಕೃತಿಯ ಒಂದು ಜೀವಂತ ಆಚರಣೆ.
ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 10 ಪ್ರಮುಖ ವಿಮಾನ ದುರಂತಗಳಿವು! ಇಲ್ಲಿದೆ ನೋಡಿ ಪಟ್ಟಿ | Plane Crash