ಇಂದಿನಿಂದ ಸ್ವಿಸ್ ಓಪನ್

ಬಸೆಲ್: ಎರಡು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಹಾಗೂ ಹಾಲಿ ಚಾಂಪಿಯನ್ ಸಮೀರ್ ವರ್ಮ ಮಂಗಳವಾರ ಆರಂಭವಾಗಲಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್​ನಲ್ಲಿ ತೋರಿದ ನಿರಾಶಾದಾಯಕ ನಿರ್ವಹಣೆಯನ್ನು ಮರೆಯುವ ವಿಶ್ವಾಸದಲ್ಲಿ ಭಾರತದ ಷಟ್ಲರ್​ಗಳಿದ್ದಾರೆ. ಸಮೀರ್ ವರ್ಮ ಮೊದಲ ಪಂದ್ಯ ದಲ್ಲಿ ಅರ್ಹತಾ ಸುತ್ತಿನಿಂದ ಬಂದ ಆಟಗಾರನನ್ನು ಎದುರಿಸಲಿದ್ದರೆ, 2ನೇ ಸುತ್ತಿನಲ್ಲಿ ದೇಶಬಾಂಧವ ಬಿ.ಸಾಯಿ ಪ್ರಣೀತ್​ರನ್ನು ಎದುರಿಸುವ ಸಾಧ್ಯತೆ ಇದೆ. ಇನ್ನು ಸೈನಾ ಈ ವರ್ಷ ಸ್ಪರ್ಧೆ ಮಾಡುತ್ತಿರುವ ನಾಲ್ಕನೇ ಟೂರ್ನಿ ಇದಾಗಿದೆ. ಮೊದಲ ಸುತ್ತಿನಲ್ಲಿ ಸೈನಾ ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿಯನ್ನು ಎದುರಿಸಲಿದ್ದಾರೆ. ಸೈನಾ ಪತಿ ಪಿ.ಕಶ್ಯಪ್ ಕೂಡ ಕಣದಲ್ಲಿದ್ದಾರೆ. ಮಹಿಳಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ. -ಪಿಟಿಐ