ನಾಯಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಕಳ್ಕೊಂಡ ಸ್ವಿಗ್ಗಿ ಡೆಲಿವರಿ ಬಾಯ್!

ಹೈದರಾಬಾದ್: ಇದು ಜೀವಭಯದಿಂದ ಜೀವನವೇ ಕೊನೆಯಾದಂಥ ಪ್ರಕರಣ. ನಾಯಿಯೊಂದರಿಂದ ತಪ್ಪಿಸಿಕೊಳ್ಳಲೆಂದು ಮೂರನೇ ಮಹಡಿಯಿಂದ ಜಿಗಿದ ಸ್ವಿಗ್ಗಿ ಡೆಲಿವರಿ ಬಾಯ್ ಪ್ರಾಣ ಕಳೆದುಕೊಂಡಿದ್ದಾನೆ. ಹೈದರಾಬಾದ್​ನ ಬಂಜಾರಾ ಹಿಲ್ಸ್ ಬಳಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಪ್ರಕರಣ ನಡೆದಿದೆ. ರಿಜ್ವಾನ್​ ಎಂಬಾತ ಸಾವಿಗೀಡಾದ ಸ್ವಿಗ್ಗಿ ಡೆಲಿವರಿ ಬಾಯ್​. ಬುಧವಾರ ರಾತ್ರಿ ಫುಡ್ ಡೆಲಿವರಿ ಕೊಡಲು ಹೋಗಿದ್ದಾಗ ಈ ಅವಘಡ ಸಂಭವಿಸಿತ್ತು. ಫುಡ್ ಡೆಲಿವರಿಗಾಗಿ ಅಪಾರ್ಟ್​ಮೆಂಟ್​ಗೆ ಹೋಗಿದ್ದ ರಿಜ್ವಾನ್ ಅಲ್ಲಿದ್ದ ಸಾಕುನಾಯಿಯೊಂದರ ಬೊಗಳುವಿಕೆಗೆ ಬೆದರಿ, ಅದರ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. … Continue reading ನಾಯಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಕಳ್ಕೊಂಡ ಸ್ವಿಗ್ಗಿ ಡೆಲಿವರಿ ಬಾಯ್!