ಹಸ್ತಮೈಥುನ ದೃಶ್ಯದ ಬಗ್ಗೆ ನನ್ನನ್ನು ಕೇಳಿ ನನ್ನ ತಂದೆಯನ್ನಲ್ಲ: ನಟಿ ಸ್ವರಾ ಭಾಸ್ಕರ್​​

ಮುಂಬೈ: ಬಾಲಿವುಡ್​ ಸಿನಿಮಾ ‘ವೀರೆ ದಿ ವೆಡ್ಡಿಂಗ್’​ ಚಿತ್ರದ ನಟಿ ಸ್ವರಾ ಭಾಸ್ಕರ್​ ಅವರ ಫೋಟೋವೊಂದನ್ನು ಅಪ್​ಲೋಡಿ ಮಾಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದು, ಇದಕ್ಕೆ ನಟಿ ಸ್ವರಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ

ಮಾಜಿ ಕೊಮೊಡೊರ್ ಹಾಗೂ ಭಾರತದ ಭದ್ರತೆ ಮತ್ತು ಕಾರ್ಯತಂತ್ರ ವ್ಯವಹಾರಗಳ ಬಗೆಗಿನ ಪ್ರಮುಖ ತಜ್ಞರು ಮತ್ತು ನಟಿ ಸ್ವರಾ ಭಾಷ್ಕರ್​ ಅವರ ತಂದೆಯಾಗಿರುವ ಚಿತ್ರಾಪು ಉದಯ್ ಭಾಸ್ಕರ್ ಅವರು ಸೆಕ್ಷನ್​ 377 ಮೇಲಿನ ಸುಪ್ರೀಂ ಕೋರ್ಟ್​ ತೀರ್ಪನ್ನು ಶ್ಲಾಘಿಸಿದ್ದರು. ಅಲ್ಲದೆ, ಎಲ್​​ಜಿಬಿಟಿ ತೀರ್ಮಾನಕ್ಕೆ ಸಂಬಂಧಿಸಿದಂತೆ “ಸಂವಿಧಾನಾತ್ಮಕ ನೈತಿಕತೆ” ಬಗ್ಗೆ ವಕೀಲೆ ಮೇನಕ ಗುರುಸ್ವಾಮಿ ಅವರಿಗಿದ್ದ ಅರಿವಿನ ಬಗ್ಗೆ ಶ್ಲಾಘಿಸಿ ಟ್ವೀಟ್​ ಮಾಡಿದ್ದರು.

ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ನೆಟ್ಟಿಗರು ನಟಿ ಸ್ವರಾ ಅವರ ಹಸ್ತಮೈಥುನ ದೃಶ್ಯ ಸಂಬಂಧದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ, ಯಾರವಳು? ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ. ನಿಜವಾಗಿಯೂ ನಾನು ಸ್ವರಾ ಅವರ ದೊಡ್ಡ ಅಭಿಮಾನಿ ಎಂದೆಲ್ಲಾ ವ್ಯಂಗ್ಯವಾಡಿದ್ದಾರೆ.

ನಿನ್ನನ್ನು ನೋಡಿ ನಿಮ್ಮ ತಂದೆ ಈಗ ಹೆಮ್ಮೆ ಪಡುತ್ತಾರೆ. ಹೆಮ್ಮೆಯ ತಂದೆಗೆ ಹೆಮ್ಮೆಯ ಮಗಳು, ಧನ್ಯವಾದಗಳು ಸ್ವರಾ ಎಂದೆಲ್ಲ ಕಮೆಂಟ್​ ಮಾಡಿದ್ದಾರೆ.

ಇದಕ್ಕೆ ಸಿಡಿಮಿಡಿಗೊಂಡಿರುವ ಸ್ವರಾ ಅವರು ತಮ್ಮ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಕಲಾವಿದೆ. ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ. ಮುಂದಿನ ಬಾರಿ ಏನೇ ಕೇಳುವುದಾದರೆ ನೇರವಾಗಿ ನನ್ನನ್ನೆ ಕೇಳಿ. ನನ್ನ ತಂದೆಯನ್ನು ಕೇಳಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ಹೆಸರಿನಲ್ಲಿರುವ ವೀರ್​ ಎಂಬ ಪದವನ್ನು ಬಿಟ್ಟುಬಿಡಿ. ಇಂತಹ ಕೆಳಮಟ್ಟದ ತಂತ್ರಗಳಿಂದ ಹಿರಿಯ ವ್ಯಕ್ತಿಗಳನ್ನು ಅವಮಾನಿಸುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

https://twitter.com/pannalalsharm14/status/1037973144676577281