Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಅನ್ಯರೊಂದಿಗೆ ಬೆಸೆಯುವ ಕಲೆ

Sunday, 11.12.2016, 2:00 AM       No Comments

| ಸ್ವಾಮಿ ಸುಖಬೋಧಾನಂದ

ಜಾನ್ ಎಸ್.ಮಿಲ್ ಹೇಳಿದ: ‘‘ಯಾರು ತಮ್ಮ ಮನಸ್ಸುಗಳನ್ನು ತಮ್ಮ ಸಂತೋಷವನ್ನು ಬಿಟ್ಟು ಬೇರೊಂದು ವಿಷಯದ ಮೆಲೆ ಏಕಾಗ್ರಗೊಳಿಸುವರೋ, ಅವರೇ ಸಂತೋಷವಾಗಿರುತ್ತಾರೆ’’. ಅನ್ಯರೊಂದಿಗೆ ಸಂಪರ್ಕ ಬೆಳೆಸುವುದನ್ನು ಕಲಿಯುವುದು ಜೀವನದಲ್ಲಿ ಒಂದು ಮಹತ್ವದ ಪಾಠ. ನಾವು ಹೆಚ್ಚಾಗಿ ‘ನಾನು’,‘ನನ್ನ’ ಗಳಿಂದ ತುಂಬಿಕೊಂಡಿರುವುದರಿಂದ, ಅನ್ಯರೊಡನೆ ಸಂಪರ್ಕ ಸಾಧ್ಯವಾಗುವುದಿಲ್ಲ. ಈ ಸ್ಥಿತಿಯಲ್ಲಿದ್ದಾಗ ಅದನ್ನು ‘ನೀವು’ ಮತ್ತು ‘ನಾವು’ಗಳಿಗೆ ಬದಲಾಯಿಸಿಕೊಳ್ಳುವುದು ಅತ್ಯುತ್ತಮ ಮಾರ್ಗ.

ಇದು ನಿಮ್ಮ ಸಂಭಾಷಣೆಗಳ ಅನುಭವದಲ್ಲಿ ಬಹಳ ವ್ಯತ್ಯಾಸವನ್ನು ಉಂಟುಮಾಡುತ್ತದೆ.

  • ಅನ್ಯರೊಡನೆ ಸಂಪರ್ಕ ಬೆಳೆಸಲು ಅತ್ಯುತ್ತಮ ತಂತ್ರ ಯಾವುದು?

ಅದು ಅಡುಗೆಯಂತೆ. ಒಂದೇ ಅತ್ಯುತ್ತಮ ತಂತ್ರವಿಲ್ಲ. ಅದರಲ್ಲಿ ಹಲವು ಸಂಗತಿಗಳು ಸೇರಿಕೊಂಡಿವೆ. ಜೀವನದಲ್ಲಿರುವ ಸಂಕೀರ್ಣತೆಯನ್ನು ಅಲಕ್ಷಿಸಬೇಡಿ. ಎಲ್ಲವನ್ನೂ ಆಯಾ ಸನ್ನಿವೇಶಗಳನ್ನು ನೋಡಿ ನಿರ್ಧರಿಸಬೇಕಾಗುತ್ತದೆ. ಅತಿ ಮುಖ್ಯವಾಗಿರುವುದು ಅನ್ಯರೊಡನೆ ಸಂಪರ್ಕ ಬೆಳೆಸಬೇಕೆಂಬ ನಿಮ್ಮ ಉದ್ದೇಶದ ಪ್ರಾಮಾಣಿಕತೆ. ಅದಿದ್ದರೆ, ನಿಮ್ಮ ಬುದ್ಧಿಯೇ ನಿಮಗೆ ಹೇಗೆ ಮುಂದುವರಿಯಬೇಕೆಂದು ಹೇಳುತ್ತದೆ. ಇದೇ ಸಂಕಲ್ಪದ ಶಕ್ತಿ. ಎಲ್ಲಾ ಸೃಜನಶೀಲ ವ್ಯಕ್ತಿಗಳೂ, ಏನನ್ನಾದರೂ ಸೃಷ್ಟಿಸುವ ಮೊದಲು ಪ್ರಬಲ ಸಂಕಲ್ಪ ಮಾಡುತ್ತಿದ್ದರು. ಬಳಿಕ ಅದನ್ನು ಮತ್ತೊಂದು ಸ್ತರಕ್ಕೆ ಒಯ್ಯುತ್ತಿದ್ದರು.

ಅನಂತರದ ಹೆಜ್ಜೆ, ನೀವು ಏನು ಮಾಡಬೇಕೆಂದಿರುವಿರೋ, ಅದರಲ್ಲಿ ಪ್ರೀತಿ ಮತ್ತು ಸಹಾನುಭೂತಿ ಹೊಂದಿರಬೇಕು. ಸಹಾನುಭೂತಿಯಲ್ಲಿ ಅನ್ಯರನ್ನು ಕ್ಷಮಿಸುವ ಸಾಮರ್ಥ್ಯವೂ ಸೇರಿರುತ್ತದೆ. ಮೂರನೆಯದಾಗಿ ನಿಮ್ಮ ಮುಗುಳ್ನಗುವಿನಿಂದ, ಒಳ್ಳೆಯ ಮಾತಿನಿಂದ ಅಥವಾ ವರ್ತನೆಯಿಂದ ಅವಕಾಶವನ್ನು ಸೃಷ್ಟಿಸಿರಿ.

ಈ ಶಕ್ತಿಗಳು ಸ್ವಾರಸ್ಯಕರ ರೀತಿಯಲ್ಲಿ ಒಂದಾಗಿ, ಅನ್ಯರೊಡನೆ ಪ್ರಾಮಾಣಿಕವಾಗಿ ಸಂಪರ್ಕ ಬೆಳೆಸುವ ಕಲೆಯನ್ನು ಕಲಿಸುತ್ತವೆ.

  • ಆಸಕ್ತಿ ತೋರದ ತಣ್ಣನೆಯ ಸ್ವಭಾವದ ಗೆಳೆಯನೊಡನೆ ಹೇಗೆ ನಡೆದುಕೊಳ್ಳಬೇಕು?

ಆತನಿಗೆ ಒಂದಿಷ್ಟು ಅವಕಾಶ ನೀಡಿ. ಆತನ ಭಾವನೆಗಳನ್ನು ಗೌರವಿಸಿ. ಪ್ರತಿವ್ಯಕ್ತಿಯೂ ತನ್ನದೇ ಆದ ಹೋರಾಟದಲ್ಲಿ ಮಗ್ನನಾಗಿರುತ್ತಾನೆಂಬುದನ್ನು ಅರಿತುಕೊಳ್ಳಿ. ಆತನ ವರ್ತನೆಯಿಂದ ನಿಮಗೆ ಬೇಸರವಾದರೆ ‘‘ಖಾಲಿಯಾಗಿರುವ ಕಪ್ಪನ್ನು ಯಾರೂ ಕದಡುವುದಿಲ್ಲ’’ ಎನ್ನುವ ಸತ್ಯವನ್ನು ತಿಳಿಯಿರಿ.

ಬೆಕ್ಕುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ, ನೀವು ಅವುಗಳಿಗೆ ಅವಕಾಶ ನೀಡಬೇಕೆಂದು ತಿಳಿಯುತ್ತದೆ. ಆಗ ಬೆಕ್ಕು ನಿಧಾನವಾಗಿ ಬಂದು ತನ್ನ ಮೈಯನ್ನು ನಿಮ್ಮ ಮೈಗೆ ಅಥವಾ ಇಷ್ಟವಾದವರ ಮೈಗೆ ಉಜ್ಜುತ್ತದೆ. ಬೆಕ್ಕಿಗೆ ಅವಕಾಶ ಬೇಕು. ನಾಯಿಗೆ ಬೇಕಾಗಿಲ್ಲ. ಬೆಕ್ಕು ತನ್ನದೇ ಆದ ರೀತಿಯಲ್ಲಿ ಪ್ರೀತಿಯಿಂದ ನಿಮ್ಮ ಹತ್ತಿರ ಬರುತ್ತದೆ. ಕೆಲವು ವ್ಯಕ್ತಿಗಳು ಬೆಕ್ಕಿನ ಮಾದರಿಯವರಾಗಿರುತ್ತಾರೆ. ಆದ್ದರಿಂದ ನಿಮ್ಮ ಗೆಳೆಯನಿಗೆ ಸ್ಪಂದಿಸಲು ಅವಕಾಶ ನೀಡಿ. ಅವನ ಭಾವನೆಗಳನ್ನು ಗೌರವಿಸಿ. ಅವನ ಬಗ್ಗೆ ಸಹಾನುಭೂತಿ ತೋರಿಸಿ. ಏಕೆಂದರೆ ಅವನು ಅವನದೇ ಆದ ಹೋರಾಟದಲ್ಲಿ ನಿರತನಾಗಿದ್ದಾನೆ. ನೀವು ನಿಮ್ಮ ದೃಷ್ಟಿಕೋನವನ್ನು ಸ್ವಲ್ಪಕಾಲ ಅಮಾನತಿನಲ್ಲಿರಿಸಿ, ಆತನ ದೃಷ್ಟಿಯಿಂದ ನೋಡಲು ಯತ್ನಿಸಿ. ಆಗ ಅವನೊಡನೆ ಗಾಢ ಸಂಬಂಧ ಬೆಳೆಸಬಹುದು. ನನಗೆ ಜನರೊಂದಿಗೆ ಸಂಬಂಧವಿಲ್ಲವೆಂದು ಅನಿಸುತ್ತದೆ. ಅನ್ಯರಿಂದ ನಾನು ತೀರ ಭಿನ್ನನಾಗಿರುವುದರಿಂದ ಅವರೊಡನೆ ಆತ್ಮೀಯತೆ ಬೆಳೆಸಲಾಗುತ್ತಿಲ್ಲ. ಅವರ ಹಮ್ಮು ಬಿಮ್ಮುಗಳನ್ನು ನಾನು ಸಹಿಸಲಾರೆ.

ಅನ್ಯರಲ್ಲೂ ನಿಮ್ಮಲ್ಲೂ ಇರುವ ಸಮಾನ ಅಂಶಗಳನ್ನು ನೋಡುವುದು ಸಂಬಂಧರಾಹಿತ್ಯ ಭಾವನೆಯನ್ನು ನಿರ್ವಹಿಸುವ ಅತ್ಯುತ್ತಮ ಮಾರ್ಗ. ದೇಹ ರಚನೆ, ಮನಸ್ಸು, ಭಾವನೆ ಮುಂತಾದ ಎಲ್ಲವೂ ನಿಮ್ಮಲ್ಲಿರುವುದೇ ಅವರಲ್ಲಿಯೂ ಇವೆ. ಅವರ ಕಣ್ಣಿನಿಂದ ನೋಡಬೇಕು. ಅವರ ಬಾಯಿಯಿಂದ ಉಣ್ಣಬೇಕು. ಅವರ ಹೃದಯದಿಂದ ಭಾವನೆಗಳನ್ನು ಅನುಭವಿಸಬೇಕು.

ನಮ್ಮೆಲ್ಲರಲ್ಲೂ ಸಮಾನವಾಗಿರುವ ಅಂಶಗಳು ಬೇಕಾದಷ್ಟಿವೆ. ಈ ಸಮಾನತೆಯನ್ನು ನೋಡಿ. ಆತ್ಮೀಯತೆಯನ್ನು ಬೆಳೆಸಿಕೊಳ್ಳಿ.

ಈ ಕುರಿತು ವಿಚಾರ ಮಾಡಿ: ತಂದೆ: ‘‘ನಿನ್ನಲ್ಲಿರುವ ಯಾವ ಗುಣವನ್ನು ನಿನ್ನ ಬಾಯ್ಫ್ರೆಂಡ್ ಮೆಚ್ಚುತ್ತಾನೆ?’’

ಮಗಳು: ‘‘ಅವನ ಪ್ರಕಾರ ನಾನು ನೋಡಲು ಸುಂದರಿಯಾಗಿದ್ದೇನೆ, ಜಾಣೆ ಮತ್ತು ಚೆನ್ನಾಗಿ ಹಾಡುತ್ತೇನೆ’’

ತಂದೆ: ‘‘ನೀನು ಅವನಲ್ಲಿ ಯಾವ ಅಂಶಗಳನ್ನು ಇಷ್ಟಪಡುತ್ತೀ?’’

ಮಗಳು: ‘ಅವನು ನಾನು ಜಾಣೆ, ಸುಂದರಿ ಹಾಗೂ ಚೆನ್ನಾಗಿ ಹಾಡುತ್ತೇನೆಂದು ತಿಳಿಯುತ್ತಾನಲ್ಲ – ಅದನ್ನು’’.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top