ಸರ್ಪ ದೋಷ ಪರಿಹರಿಸುತ್ತೇನೆ… ನಿನ್ನ ಗುಪ್ತಾಂಗದಲ್ಲಿ ದೋಷವಿದೆ… 5 ಬಾರಿ ಸೆಕ್ಸ್​ ಮಾಡು ಎಂದು ಹೇಳಿ ಪರಾರಿ…

ಬೆಂಗಳೂರು: ನಿನಗಿರುವ ಸರ್ಪದೋಷ ನಿವಾರಿಸುತ್ತೇನೆ… ನಿನ್ನ ಗುಪ್ತಾಂಗದಲ್ಲಿ ದೋಷವಿದೆ… ಅದನ್ನು ಸರಿಪಡಿಸಲು ನೀನು ನನ್ನಿಂದ 5 ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು… ನನ್ನ ಜತೆ 5 ಬಾರಿ ಸೆಕ್ಸ್​ ಮಾಡಬೇಕು… ಅಷ್ಟೇ ಅಲ್ಲ, ನನ್ನ ಮಗನೊಂದಿಗೂ ಸಹಕರಿಸಬೇಕು ಎಂದು ಯುವತಿಗೆ ಹೇಳಿದ್ದ ಕಾಮಿಸ್ವಾಮಿಯೊಬ್ಬ ಬಂಧನ ಭೀತಿಯಲ್ಲಿ ಕಾಲ್ಕಿತ್ತಿದ್ದರೆ ಆತನ ಪುತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಗಣೇಶ್​ ಪರಾರಿಯಾಗಿರುವ ಸ್ವಾಮಿ. ಈತನ ಪುತ್ರ ಮಣಿಕಂಠ ಸಿಕ್ಕಿಬಿದ್ದಿರುವವ. ಬಾಣಸವಾಡಿಯ ಕಂಪನಿಯೊಂದರಲ್ಲಿ ಯುವತಿಯೊಬ್ಬರು ಮಾನವಸಂಪನ್ಮೂಲ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಏನೋ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸಲಹೆ ಕೇಳಲೆಂದು ಗಣೇಶ್​ನನ್ನು ಸಂಪರ್ಕಿಸಿದ್ದರು.

ಅದಕ್ಕೆ ಆತ ನಿಮಗೆ ಸರ್ಪದೋಷವಿದ್ದು ಅದನ್ನು ಪರಿಹರಿಸಲು ಪೂಜೆ ಮಾಡಬೇಕಿದೆ ಎಂದು ಹೇಳಿ ಶನಿವಾರ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರವಾಗಿ ಪೂಜೆ ಮಾಡಿದ್ದ. ಈ ಕೈಂಕರ್ಯಕ್ಕೆ ಆತನ ಪುತ್ರ ಮಣಿಕಂಠ ಸಹಕರಿಸಿದ್ದ.

ಪೂಜೆ ಮುಗಿದ ಬಳಿಕ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದ. ಆತನ ಮಾತು ನಂಬಿದ ಯುವತಿ ಶನಿವಾರ ರಾತ್ರಿಯೇ ಆತನೊಂದಿಗೆ ಕುಟುಂಬದವರ ಜತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದರು. ಕುಕ್ಕೆಯಲ್ಲಿ ಎರಡು ಪ್ರತ್ಯೇಕ ಕೋಣೆಗಳನ್ನು ಮಾಡಿದ ಬಳಿಕ ಯುವತಿ ಜತೆ ಕಾಮದಾಟವಾಡಲು ಗಣೇಶ್​ ಹುನ್ನಾರ ನಡೆಸಿದ್ದ ಎನ್ನಲಾಗಿದೆ.

ಈ ಹಂತದಲ್ಲಿ ಯುವತಿಯ ಗುಪ್ತಾಂಗದಲ್ಲಿ ದೋಷವಿದೆ ಎಂದು ಹೇಳಿ ಅಸಲಿ ಆಟ ಶುರುವಿಟ್ಟುಕೊಂಡಿದ್ದ. ನನ್ನಿಂದ 5 ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು… 5 ಬಾರಿ ಕಾಮದಾಟ ಅಡಬೇಕು… ಅಷ್ಟೇ ಅಲ್ಲ ನನ್ನ ಪುತ್ರನ ಜತೆಯೂ ದೇಹ ಹಂಚಿಕೊಳ್ಳಬೇಕು… ಎಂದು ಪುಸಲಾಯಿಸಿದ್ದ. ಅಲ್ಲದೆ, ಈ ಸಂಗತಿಯನ್ನು ಯಾವುದೇ ಕಾರಣಕ್ಕೂ ಪಾಲಕರಿಗೆ ತಿಳಿಸದಂತೆ ಯುವತಿಗೆ ತಾಕೀತು ಮಾಡಿದ್ದ.

ಹೆದರಿದ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರು ತಲುಪಿಕೊಂಡಿದ್ದರು. ಆನಂತರ ಬಾಣಸವಾಡಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಅದರಂತೆ ಗಣೇಶ್​ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಣಿಕಂಠನನ್ನು ಬಂಧಿಸಿದ್ದಾರೆ. ಗಣೇಶ್​ ಸದ್ಯ ತಲೆಮರೆಸಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)

3 Replies to “ಸರ್ಪ ದೋಷ ಪರಿಹರಿಸುತ್ತೇನೆ… ನಿನ್ನ ಗುಪ್ತಾಂಗದಲ್ಲಿ ದೋಷವಿದೆ… 5 ಬಾರಿ ಸೆಕ್ಸ್​ ಮಾಡು ಎಂದು ಹೇಳಿ ಪರಾರಿ…”

  1. ಜನ ಕಲಿತರು ಸಹ ವಿಜ್ಞಾನ ನಂಬದೆ ಇರುವುದು ಮೂರ್ಖತನ. ಡಾಕ್ಟರ ಮತ್ತು ಸಂಶೋಧಕರು ಅಪಾರ ಕಷ್ಟ ಮಾಡುತ್ತಾರೆ, ಏಕೆ?

  2. ಅಷ್ಟೆಲ್ಲ ವಿದ್ಯೆ, ಓದು ಇದ್ದೂ ಈ ಹೆಣ್ಣುಮಕ್ಕಳು ಇಂಥವರ ಬಲೆಗೆ ಹೇಗೆ ಬೀಳುತ್ತಾರೆ? ಮೌಢ್ಯದ ಪರಮಾವಧಿಯಲ್ಲವೆ? ಪುಣ್ಯ ಕೊನೆ ಕ್ಷಣದಲ್ಲಾದರೂ ಬಚಾವಾದದ್ದು ಸಂತೋಷ. ಇನ್ನು ಗಣೇಶ್ ಎಂಬ ಆ ಬದ್ಮಾಷ್ ಸ್ವಾಮಿಯನ್ನ ಹಾಡಹಗಲೇ ಸಾರ್ವಜನಿಕವಾಗಿ ನೇಣಿಗಟ್ಟಬೇಕು… ಥೂ ಅವನ ಜನ್ಮ ಸುಡ.

  3. ಇದಕ್ಕೆ ಕಾರಣ ಮಾಧ್ಯಮಗಳು, ಟಿವಿ ಚಾನೆಲ್ ಗಳು ಮತ್ತು ಪತ್ರಿಕೆಗಳೇ, ಇವರೇ ಮೌಢ್ಯಗಳಿಗೆ ಅತಿಯಾಗಿ ತಮ್ಮ ಬೆಂಬಲ ನೀಡುತ್ತಿದ್ದಾರೆ,ಜನರಲ್ಲಿ ಮೌಢ್ಯಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕಾದ ಮಾಧ್ಯಮಗಳೇ ಇಂದು ಮೌಢ್ಯಗಳಿಗೆ ತಮ್ಮ ಅತಿಯಾದ ಬೆಂಬಲ ನೀಡುತ್ತಿವೆ

Leave a Reply

Your email address will not be published. Required fields are marked *