Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವಿವೇಕವಂತರಾಗಿರಿ ಸಂತೃಪ್ತರಾಗಿರಿ…

Sunday, 18.12.2016, 2:00 AM       No Comments
  • ಸ್ವಾಮಿ ಸುಖಬೋಧಾನಂದ

ಜೀವನ ವಿವೇಕವನ್ನು ತಿಳಿದುಕೊಂಡು ಬರಲು ಮುಲ್ಲಾ ನಸ್ರುದ್ದೀನ್​ನನ್ನು ದೊರೆಯು ಭಾರತಕ್ಕೆ ಕಳುಹಿಸಿದ. ಮುಲ್ಲಾ ಒಂದು ವರ್ಷದ ನಂತರ ಒಂದು ಮೂಲಂಗಿ ಗಡ್ಡೆಯನ್ನು ಹಿಡಿದುಕೊಂಡು ಮರಳಿದ. ದೊರೆಗೆ ಇದನ್ನು ಕಂಡು ನಿರಾಸೆಯಾಗಿ ಸ್ಪಷ್ಟೀಕರಣ ಕೇಳಿದ್ದಕ್ಕೆ ಮುಲ್ಲಾ ಹೀಗೆಂದ:

‘ಈ ಮೂಲಂಗಿ ಗಡ್ಡೆ ಮಣ್ಣಿನಲ್ಲಿ ಹುದುಗಿರುವಂತೆ, ಜೀವನ ವಿವೇಕವೂ ನಮ್ಮ ಆಂತರ್ಯದಲ್ಲೇ ಹುದುಗಿದೆ. ಅದು ಫಲವಾಗಿ ಬೆಳೆಯಲು ಒಳ್ಳೆಯ ಗೊಬ್ಬರ, ನೀರು ಹಾಕಿ ಆರೈಕೆ ಮಾಡಬೇಕು. ವಿವೇಕ ನಮ್ಮೊಳಗಿದ್ದರೂ, ಸರಿಯಾದ ಮಣ್ಣು ಹಾಗೂ ಕಠಿಣ ಪರಿಶ್ರಮವಿಲ್ಲದೆ ಜೀವನವು ಸಮೃದ್ಧವಾಗಲಾರದು. ಹೊರಗಡೆ ಸಾಕಷ್ಟು ಕತ್ತೆಗಳಿರುವುದರಿಂದ ಮೂಲಂಗಿ ನೆಲದೊಳಗೇ ಅಡಗಿರುತ್ತದೆ. ನಮ್ಮ ಜೀವನದಲ್ಲಿ ಮನುಷ್ಯರೂಪದ ಕತ್ತೆಗಳಿಂದ ದೂರವಾಗಿರಲು ವಿವೇಕ ಒಳಗೇ ಅಡಗಿರುತ್ತದೆ’.

  • ಇದನ್ನು ಇನ್ನೂ ಸ್ಪಷ್ಟವಾಗಿ ವಿವರಿಸುವಿರಾ?

ನಾವು ಸಂತೋಷವಾಗಿರುವುದಕ್ಕಾಗಿ ವಸ್ತುಗಳ ಹಿಂದೆ ಓಡುತ್ತೇವೆ. ಆದರೆ ಅಸ್ತಿತ್ವವು ನಮಗೆ ಪ್ರತಿರಾತ್ರಿ ಗಾಢನಿದ್ರೆಯಲ್ಲಿ ನಿರಾಯಾಸವಾದ ಆನಂದವನ್ನು ಒದಗಿಸುತ್ತಿದೆ. ಈ ಆನಂದವೇ ನಮ್ಮ ಸ್ವರೂಪವಾಗಿದ್ದರೂ, ನಾವು ಹುಚ್ಚರಂತೆ ಹೊರಗೆ ಹುಡುಕುತ್ತಾ ಓಡಾಡುತ್ತೇವೆ. ಸ್ವರ್ಗದಂತಹ ಪ್ರಪಂಚದಲ್ಲಿದ್ದರೂ ನಮ್ಮ ಮನಸ್ಸು ನರಕದಲ್ಲಿದ್ದರೆ, ಪ್ರಪಂಚವೂ ನರಕವಾಗುತ್ತದೆ. ಮನಸ್ಸು ಸ್ವರ್ಗದಲ್ಲಿದ್ದರೆ, ಎಲ್ಲೆಲ್ಲೂ ಸ್ವರ್ಗವೇ ಅನುಭವಕ್ಕೆ ಬರುತ್ತದೆ. ಪ್ರಪಂಚದಲ್ಲಿ ಗಂಡು ಹೆಣ್ಣಿನ ಹಿಂದೆ ಓಡುತ್ತಾನೆ. ಹೆಣ್ಣು ಗಂಡಿನ ಹಿಂದೆ ಓಡುತ್ತಾಳೆ. ಆದರೆ ಹೆಣ್ಣಿನೊಳಗೊಂದು ಗಂಡು ಇದೆ. ಹಾಗೆಯೇ ಗಂಡಿನೊಳಗೊಂದು ಹೆಣ್ಣಿದೆ. ಆದ್ದರಿಂದ ನಿಮ್ಮೊಳಗೇ ಪರಸ್ಪರರನ್ನು ಭೇಟಿಯಾಗಿ ನೋಡಿ. ಪುರುಷನಿಲ್ಲದ ಸ್ತ್ರೀ ಅಪೂರ್ಣಳು, ಸ್ತ್ರೀ ಇಲ್ಲದ ಪುರುಷ ಅಪೂರ್ಣ. ಪುರುಷನಿಗೆ ರೆಕ್ಕೆಗಳಿವೆ, ಆದರೆ ಬೇರುಗಳಿಲ್ಲ. ಬೇರಿಲ್ಲದಿರುವುದರಿಂದ ಆತ ಎಲ್ಲೆಲ್ಲೋ ಹಾರಾಡುತ್ತಿರುತ್ತಾನೆ. ಸ್ತ್ರೀ ಅವನಿಗೆ ಬೇರನ್ನು, ನೆಲೆಯನ್ನು ನೀಡುವುದರಿಂದ, ಅವನು ಎಲ್ಲೆಲ್ಲೋ ಹಾರಾಡುತ್ತ ಕಳೆದುಹೋಗುವುದಿಲ್ಲ. ಸಾಮಾನ್ಯವಾಗಿ ಸ್ತ್ರೀಗೆ ಬೇರುಗಳಿವೆ, ಆದರೆ ರೆಕ್ಕೆಗಳಿಲ್ಲ. ಹೀಗಾಗಿ ಅವರಿಬ್ಬರೂ ಪರಸ್ಪರ ಪೂರಕರು. ಅವರು ಪರಸ್ಪರರಿಗೆ ಪೂರಕವಾಗಿ ವರ್ತಿಸುವ ಬದಲು, ಪರಸ್ಪರರೊಡನೆ ಸ್ಪರ್ಧಿಸತೊಡಗಿದರೆ ಸಂಘರ್ಷ ಸೃಷ್ಟಿಯಾಗುತ್ತದೆ. ಆದ್ದರಿಂದ, ಸ್ಪರ್ಧಿಸುವುದನ್ನು ಬಿಟ್ಟು ಸಹಕರಿಸಲು ಕಲಿಯಿರಿ. ಈ ಪ್ರಕ್ರಿಯೆಯಲ್ಲಿ ನಿಮ್ಮೊಳಗೇ ಇರುವ ಸ್ತ್ರೀ-ಪುರುಷಾಂಶಗಳನ್ನು ಕಂಡುಕೊಳ್ಳುವಿರಿ.

  • ಸಂತೃಪ್ತಿಯೊಂದೇ ಜೀವನದ ಸರ್ವಸ್ವವೇ?

ಅಲ್ಲ. ಒಂದು ಹಂದಿ ಕೂಡ ತನ್ನ ಪಾಡಿಗೆ ತಾನು ಸಂತೃಪ್ತವಾಗಿರಬಹುದು. ಆದರೆ ಅದರಲ್ಲಿ ಕೃತಕೃತ್ಯತೆಯ ಹೊಳಪು ಇರುವುದಿಲ್ಲ. ಅನೇಕ ಮಂದಿ ಸಂತೃಪ್ತರಾದರೂ ಅಪ್ರಜ್ಞಾವಸ್ಥೆಯಲ್ಲಿರುತ್ತಾರೆ. ಒಂದು ಬಗೆಯ ಮಂಕುತನ ಅವರಲ್ಲಿರುತ್ತದೆ. ಆರೋಗ್ಯಕರ ಅತೃಪ್ತಿಯೆಂಬುದೂ ಇದೆ. ಶಾಸ್ತ್ರೀಯ ನೃತ್ಯದಲ್ಲಿ ಭೀಭತ್ಸವೂ ನವರಸಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಅನಾರೋಗ್ಯಕರ ಸಂತೃಪ್ತಿಗಿಂತ, ಆರೋಗ್ಯಕರ ಅತೃಪ್ತಿಯೇ ಮೇಲು. ಈ ಅತೃಪ್ತಿ ನಿಜವಾದ ಆನಂದವನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ಬಾಹ್ಯದಲ್ಲಿ ನಡೆಸಿದ ಹುಡುಕಾಟದಿಂದ ಅತೃಪ್ತಿ ಹೆಚ್ಚಾಗಿರುವುದರಿಂದ, ನೀವು ಅಂತರಂಗದ ಕಡೆ ಸಾಗತೊಡಗುವಿರಿ. ಹಾಗೇ, ಆಳಕ್ಕಿಳಿದಾಗ ಒಂದು ವಿಶಿಷ್ಟ ಮೂಲಾಧಾರವನ್ನೂ, ಬದುಕಿನ ಬೇರುಗಳ ಸ್ವರೂಪವನ್ನೂ ಕಾಣುವಿರಿ. ಆಗ ತೃಪ್ತಿ, ಅತೃಪ್ತಿಗಳನ್ನು ಮೀರಿರುವ ಆನಂದದ ಸ್ಥಿತಿಯನ್ನು ತಲುಪುವಿರಿ. ಇದನ್ನು ಕಲಿಸಲು ಸಾಧ್ಯವಿಲ್ಲ. ಸಾಧನೆಯಿಂದ ಅನುಭವಕ್ಕೆ ತಂದುಕೊಳ್ಳಬೇಕಷ್ಟೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top