ಉತ್ತಮ ಆರೋಗ್ಯಕ್ಕೆ ಬೇಕು ಸ್ವಚ್ಛತೆ

ವಿಜಯವಾಣಿ ಸುದ್ದಿಜಾಲ ಬೀದರ್
ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳಲು ಸಂಕಲ್ಪ ಮಾಡಬೇಕು ಎಂದು ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಹೇಳಿದರು.
ಪನ್ನಾಲಾಲ ಹೀರಾಲಾಲ ಕಾಲೇಜಿನಲ್ಲಿ ಗುರುವಾರ ಸ್ವಚ್ಛ ಭಾರತ ಅಭಿಯಾನ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದ ಸ್ವಚ್ಛತೆಗೆ ನಗರಸಭೆಯಿಂದ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ. ಮನೆ-ಮನೆಯಿಂದ ಕಸ ಸಂಗ್ರಹಿಸಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿರು ತಮ್ಮ ಮನೆ ಕಸವನ್ನು ಎಲ್ಲೆಂದರಲ್ಲಿ ಹಾಕದೆ, ಈ ವಾಹನಕ್ಕೆ ಕೊಟ್ಟು ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸ್ವಚ್ಛ ಭಾರತ ಅಭಿಯಾನದ ಹೆಚ್ಚುವರಿ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಶೌಚಗೃಹ ನಿರ್ಮಿ ಸಲು ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆದು ತಮ್ಮ ಮನೆಗಳಲ್ಲಿ ಶೌಚಗೃಹ ನಿಮರ್ಿಸಿಕೊಳ್ಳಬೇಕು ಎಂದರು.
ಎನ್ಎಸ್ಎಸ್ ಅಧಿಕಾರಿ ಬಸವರಾಜ ಬುಳ್ಳಾ ಸ್ವಚ್ಛ ಭಾರತ ಅಭಿಯಾನದ ಕುರಿತು ವಿವರಣೆ ನೀಡಿದರು. ಆರ್​ಬಿಎಸ್ಎಸ್ ಸಂಯುಕ್ತ ಪಿಯು ಕಾಲೇಜು ಅಧ್ಯಕ್ಷ ನಂದಕಿಶೋರ ವರ್ಮಾ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ದೀಪಕ ಪುಂಡಲೀಕ, ಬ್ರಿಜ್ಕಿಶೋರ ವರ್ಮಾ, ರಾಜಕುಮಾರ ಅಗ್ರವಾಲ್, ರಾಜೇಂದ್ರಸಿಂಗ್ ಪವಾರ್, ಸತ್ಯನಾರಾಯಣ, ಘನಶ್ಯಾಮ, ಸಿಡಿಪಿಒ ಮಚ್ಛೇಂದ್ರ ವಾಘಮೋರೆ, ವೈ.ಎಚ್. ಹೊಸಮನಿ, ತನ್ವಿರ್ ಇಕ್ಬಾಲ್ ಇತರರಿದ್ದರು.
ಡಾ.ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಎನ್. ರಾಮಕೃಷ್ಣಪ್ಪ ಸ್ವಾಗತಿಸಿದರು. ನಾಗಪ್ಪ ಅಂಬಾಗೋಳ ವಂದಿಸಿದರು. ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಭಾಷಣ, ರಂಗೋಲಿ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಬುರಗಿ-ಬಳ್ಳಾರಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ನಗರಸಭೆ, ಶಿಶು ಅಭಿವೃದ್ಧಿ ಯೋಜನೆ, ವಾರ್ತಾ ಇಲಾಖೆ, ಪನ್ನಾಲಾಲ ಹೀರಾಲಾಲ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢ ಶಾಲೆಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.