ಪುತ್ತೂರು: ಪರಿಸರ ಸ್ವಚ್ಛವಾಗಿದ್ದರೆ ಮನಸ್ಸಿಗೆ ಹಿತವಾಗುತ್ತದೆ. ದೇಶದಲ್ಲಿ ೯ ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಶೇ.೭೦ಕ್ಕೂ ಅಽಕ ತ್ಯಾಜ್ಯ ಪರಸರವನ್ನು ಹಾಳುಮಾಡುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ತರುವ ಜತೆಗೆ ೧೦ ಲಕ್ಷಕ್ಕೂ ಅಽಕ ಮಂದಿಗೆ ಕ್ಯಾನ್ಸರ್ ತರುತ್ತಿದೆ. ಕಾರ್ಯಕ್ರಮಗಳು ಶಿಸ್ತು, ಮೇಲ್ವಿಚಾರಣೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೆರವು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ನಗರಸಭೆ ಪುತ್ತೂರು ಸಹಕಾರದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಧ್ಯೇಯದಲ್ಲಿ ಜ.೨೧ರಿಂದ ೩೧ರವರೆಗೆ ನಡೆಯುವ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಸ ನಿರ್ವಹಣೆಯ ಮೇಲ್ವಿಚಾರಣೆ ಹಿರಿಯ ಅಽಕಾರಿಗಳಿಂದ ಸರಿಯಾಗಿ ನಡೆಯಬೇಕಾಗಿದೆ. ಸಾರ್ವಜನಿಕರು ಹಾಗೂ ಮಕ್ಕಳು ಹೆಚ್ಚು ಭಾಗವಹಿಸಿದ ಪ್ರದೇಶದ ಮಾಹಿತಿ ಹಾಗೂ ಸ್ಥಳೀಯವಾಗಿ ಸಂಗ್ರಹವಾದ ಕಸದ ವರದಿಯನ್ನು ಪ್ರತಿನಿತ್ಯ ಪಡೆಯಬೇಕು. ಹೆಚ್ಚು ಕಸ ಸಂಗ್ರಹ ಮಾಡಿದವರನ್ನು ಜ.೨೬ರಂದು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉದ್ಘಾಟಿಸಿದರು. ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ನವೀನ್ ಮಾಹಿತಿ ನೀಡಿದರು.ಅಧ್ಯಕ್ಷತೆಯನ್ನು ಆಡಳಿತಾಽಕಾರಿ ಸಂಧ್ಯಾ ಕೆ. ಎಸ್. ವಹಿಸಿದ್ದರು.
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಜನ ಶಿಕ್ಷಣ ಟ್ರಸ್ಟಿನ ನಿರ್ದೇಶಕ ಶೀನ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ತಹಸೀಲ್ದಾರ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್. ಮನೋಹರ, ಅರಣ್ಯ ಇಲಾಖೆಯ ವಲಯ ಅರಣ್ಯಾಽಕಾರಿ ಕಿರಣ್, ಶಿಕ್ಷಣಾಽಕಾರಿ ಲೋಕೇಶ್ ಎಸ್. ಆರ್., ತಾಲೂಕು ಆರೋಗ್ಯಾಽಕಾರಿ ಡಾ. ದೀಪಕ್ ಉಪಸ್ಥಿತರಿದ್ದರು.
ಸಹಾಯಕ ಲೆಕ್ಕಾಽಕಾರಿ ರವಿಚಂದ್ರ ಸ್ವಾಗತಿಸಿದರು. ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿ ಪ್ರಸ್ತಾವನೆಗೈದರು. ಎನ್.ಆರ್.ಎಲ್.ಎಂ. ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ವಂದಿಸಿದರು. ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛತೆಯ ಸತ್ಯ ಸಂವಾದ ನಡೆಯದೆ ಬಹಳ ವರ್ಷವಾಗಿದೆ. ೨೦೦೫ರಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದ್ದು, ಸ್ವಚ್ಛತಾ ಶ್ರಮದಾನದ ಮೂಲಕ ಸ್ವಚ್ಛ ತಾಲೂಕು ಆಗುವ ಲಕ್ಷಣ ಕಂಡು ಬರುತ್ತಿದೆ. ಸಂಘಟಿತವಾದ ಪ್ರಾಮಾಣಿಕ ಪ್ರಯತ್ನದಿಂದ ಕೆಲಸ ಯಶಸ್ಸಿಗೊಳಿಸಬಹುದು. ಆರೋಗ್ಯಕ್ಕೆ ಅಪಾಯಕಾರಿಯಾದ ಡೈಪರ್ಸ್, ಪಾಡ್ ಪ್ಯಾಂಪರ್ ಬಳಕೆ ಕಡಿಮೆ ಮಾಡಬೇಕು. ಸ್ವಚ್ಛತೆ ಎಂದರೆ ದೇವರಾಗಿದ್ದು, ಬಯಲು ತ್ಯಾಜ್ಯದ ಬಗ್ಗೆ ದೈವ ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ.
| ಶೀನ ಶೆಟ್ಟಿ, ಸ್ವಚ್ಛತಾ ರಾಯಬಾರಿ
ದೇವರ ಕಟ್ಟೆಪೂಜೆ ನಡೆಯುವ ಸ್ಥಳಗಳೂ ಕಸದಿಂದ ತುಂಬುತ್ತಿರುವುದು ದುರದೃಷ್ಟಕರ ವಿಚಾರವಾಗಿದೆ. ಪ್ರಾಣಿಗಳಿಗೆ ಇರುವ ಕಾಳಜಿ ಮನುಷ್ಯರಲ್ಲಿ ಕಾಣುತ್ತಿಲ್ಲ. ಸರ್ಕಾರದ ಜತೆಗೆ ನಾವು ಕೈಜೋಡಿಸುವ ಅಗತ್ಯವಿದೆ. ಪ್ರತಿಯೊಂದು ಕಡೆ ಎಲ್ಲ ಜನರೂ ಸ್ವಚ್ಛತೆಗೆ ಮಹತ್ವ ನೀಡಿದಾಗ ಕಾರ್ಯಕ್ರಮ ಯಶಸ್ವಿಯಾಗಿಸಬಹುದು.
| ಪಂಜಿಗುಡ್ಡೆ ಈಶ್ವರ ಭಟ್
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮಹಾಲಿಂಗೇಶ್ವರ ದೇವಸ್ಥಾನ