ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

 ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಸಾಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ವಿಧಾನ ಸೌಧದಂತೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೂ ಆರಂಭಿಸಿ ಅದಿಕಾರಿಗಳಿಗೆ ಸಂಪೂರ್ಣ ಅದಿಕಾರ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುವರ್ಣಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯದ ಎಲ್ಲ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳ ಸಮಾಲೋಚನೆ-ಚಿಂತನ ಮಂಥನ ಸಭೆ ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಕಾರ್ಯಾರಂಭ ಮಾಡುವ ಕಚೇರಿಯ ಅದಿಕಾರಿಗಳಿಗೆ ಉತ್ತರ ಕರ್ನಾಟಕದ ಗ್ರಾಮೀಣಾಭಿವೃದ್ಧಿಗೆ ಅಗತ್ಯ ಯೋಜನೆಗಳ ಜಾರಿಗಾಗಿ ಆರ್ಥಿಕ ಹಾಗೂ ಆಡಳಿತಾತ್ಮಕ ತೀರ್ಮಾನ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಲಾಗುವುದು. ದಕ್ಷಿಣದಲ್ಲಿ ವಿಧಾನಸೌಧದಲ್ಲಿನ ಕಚೇರಿಗಳ ಅದಿಕಾರಿಗಳು ಎಷ್ಟೂ ಅಕಾರ ಹೊಂದಿರುತ್ತಾರೋ ಅದೇ ರೀತಿಯಲ್ಲಿ ಇಲ್ಲಿಯೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಂಸ್ಕೃತಿಯ ವಿಷಯದಲ್ಲಿ ಜಗತ್ತಿನಲ್ಲಿ ನಾವೇ ಅಗ್ರಗಣ್ಯರು. ಆದರೆ, ವಿದೇಶಕ್ಕೆ ಹೋಲಿಸಿದಾಗ ನಮ್ಮಲ್ಲಿನ ಗ್ರಾಮಗಳ ಅಭಿವೃದ್ಧಿ ಹಿನ್ನೆಡೆ ಅನುಭವಿಸಿದೆ. ಸರ್ಕಾರಿ ದಾಖಲೆಗಳು ಹೇಳುವುದೇ ಬೇರೆ ವಾಸ್ತವೇ ಬೇರೆ ಇದೆ. ಅಭಿವೃದ್ಧಿ ವಂಚಿತ ಪ್ರತಿ ಹಳ್ಳಿಗೆ ಇಲ್ಲಿವೆ. ಬಹುಗ್ರಾಮಗಳ ಅಥವಾ ಹಿಂದುಳಿದ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ ವೇಗವಾಗಿ ಅಭಿವೃದ್ಧಿ ಸಾಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂದಿಸಿದ ಜಿಪಂಗಳ ಸಿಇಒ ಹಾಗೂ ಅಲ್ಲಿನ ಜನಪ್ರತಿನಿಗಳು ಮಾಹಿತಿ ನೀಡಬೇಕು. ಇಲಾಖೆಯ ಉನ್ನತ ಅದಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಭೆ ಮೂಲಕ ಗ್ರಾಮೀಣಾಭಿವೃದ್ಧಿ ಕುರಿತು ನಿಮ್ಮೆಲ್ಲರ ಚಿಂತನೆ ಹಾಗೂ ಅನುಭವಗಳನ್ನು ತಿಳಿದುಕೊಳ್ಳುವ ವಿಶೇಷ ಅವಕಾಶ ದೊರಕಿದ್ದು, ಸರ್ಕಾರ ನಡೆಸುವ ದೈನಂದಿನ ಮಾದರಿಯ ಸಭೆ ಇದಲ್ಲ. ಮೂರು ಹಂತದ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿದಿಗಳು ನೀಡುವ ಸಲಹೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸಿ ಕ್ರಮ ಜರುಗಿಸಲಾಗುವುದು ಎಂದರು.
ಅದಕ್ಕೂ ಮುನ್ನ ಸೌಧದ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಛ ಮೇವ ಜಯತೇ ಆಂದೋಲನದ ಜಾಗೃತಿ ಜಾಥಾ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನರೇಗಾ ಆಯುಕ್ತರಾದ ಪ್ರಿಯಾಂಕಾ ಮೇರಿ ಪಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸೇರಿ ಎಲ್ಲ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳು ಇದ್ದರು.

 

50 ಲಕ್ಷ ಕೋಟಿ ರೂ.ಹೂಡಿಕೆಗೆ ಸಿದ್ಧ


6021 ಗ್ರಾಮ ಪಂಚಾಯಿತಿಗೆ ನೀಡುವ ಅನುದಾನದ ಹಂಚಿಕೆ ಕುರಿತ ಮಾಹಿತಿ ಪುಸ್ತಿಕೆಯನ್ನು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಬಿಡುಗಡೆಗೊಳಿಸಿ, ಗ್ರಾಮೀಣಾಭಿವೃದ್ಧಿ ವಿಶೇಷ ಕಚೇರಿ ಸ್ಥಾಪನೆಯ ನಿರ್ಧಾರಕ್ಕಾಗಿ ಸಚಿವ ಈಶ್ವರಪ್ಪ ಅವರನ್ನು ಅಭಿನಂದಿಸಿದರು.ಮುಂಬರುವ ದಿನಗಳಲ್ಲಿ ಅನುದಾನ ಹಂಚಿಕೆ ವ್ಯವಸ್ಥೆಗಳು ಕೂಡ ವಿಕೇಂದ್ರೀಕರಣಗೊಂಡು ದೆಹಲಿಯಿಂದ ಹಳ್ಳಿಗಳಿಗೆ ನೇರವಾಗಿ ಅನುದಾನ ಬಿಡುಗಡೆಗೊಳ್ಳಲಿದ್ದು, 2022ರ ವೇಳೆಗೆ ಎಲ್ಲರಿಗೂ ಮನೆಗಳನ್ನು ಒದಗಿಸಲಾಗುವುದು. ಭವ್ಯ ಭಾರತ ನಿರ್ಮಾಣ ಮತ್ತು ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವ ಅಂಗಡಿ ಮನವಿ ಮಾಡಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದಂತೆ ದೇಶ ಎಲ್ಲ ಪ್ರದೇಶಗಳಿಗೂ ರೈಲ್ವೆ ಸಂಪರ್ಕ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗೆ ಇಲಾಖೆ 50 ಲಕ್ಷ ಕೋಟಿ ರೂ.ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದರು.

Leave a Reply

Your email address will not be published. Required fields are marked *