More

    21ರಿಂದ ಸುತ್ತೂರು ಜಾತ್ರೋತ್ಸವ: 6 ದಿನ ಕಾರ್ಯಕ್ರಮ, 15 ಲಕ್ಷ ಭಕ್ತರ ಆತಿಥ್ಯಕ್ಕೆ ಶ್ರೀಮಠ ಸನ್ನದ್ಧ

    ನಂಜನಗೂಡು: ಧಾರ್ವಿುಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಜನಜಾಗೃತಿ ಪ್ರತೀಕವಾಗಿರುವ ಸುತ್ತೂರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.21ರಿಂದ 26ವರೆಗೆ ನಡೆಯಲಿದೆ. ಕಪಿಲಾ ನದಿ ತಟದಲ್ಲಿರುವ ಸುಕ್ಷೇತ್ರವನ್ನು ಜಾತ್ರಾ ಮಹೋತ್ಸವಕ್ಕಾಗಿ ಸಕಲ ಸಿದ್ಧತೆಯೊಂದಿಗೆ 15 ಲಕ್ಷಕ್ಕೂ ಹೆಚ್ಚು ಭಕ್ತರ ಆತಿಥ್ಯಕ್ಕೆ ಸನ್ನದ್ಧಗೊಳಿಸಲಾಗಿದೆ.

    ಮಹಾ ದಾಸೋಹಕ್ಕೆ ಸಕಲ ತಯಾರಿ ಆರಂಭಗೊಂಡಿದೆ. ವಸ್ತುಪ್ರದರ್ಶನ ಹಾಗೂ ಕೃಷಿ ಮೇಳಕ್ಕೆ ಪೂರಕ ಸಿದ್ಧತೆ ಕೈಗೊಳ್ಳಲಾಗಿದೆ. ಕೊಂಡೋತ್ಸವ, ಹಾಲರವಿ ಉತ್ಸವ, ಲಕ್ಷದೀಪೋತ್ಸವ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕಳೆಗಟ್ಟಲಿದೆ ಎಂದು ಜೆಎಸ್​ಎಸ್ ಮಹಾವಿದ್ಯಾಪೀಠ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜ.21ರಂದು ಬೆಳಗ್ಗೆ 8ಕ್ಕೆ ಜಾತ್ರೋತ್ಸವಕ್ಕೆ ಚಾಲನೆ. ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ನಡೆಯಲಿದ್ದು, ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿರುವರು. ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು ಸೇರಿ ನಾಡಿನ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

    ಜಾತ್ರಾ ವಿಶೇಷ

    • ಜ.21: ರಂಗೋಲಿ, ಸೋಬಾನೆ ಪದ, ದೇಸಿ ಆಟಗಳ ಸ್ಪರ್ಧೆ, ವೀರಭದ್ರೇಶ್ವರ ಕೊಂಡೋತ್ಸವ
    • ಜ.22: ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ.
    • ಜ.23: ರಥೋತ್ಸವ, ಧಾರ್ವಿುಕ ಸಭೆ, 25ನೇ ವರ್ಷದ ದನಗಳ ಜಾತ್ರೆ.
    • ಜ.24 : ಗಾಳಿಪಟ ಸ್ಪರ್ಧೆ, ಕೃಷಿ ವಿಚಾರ ಸಂಕಿರಣ, ಲಕ್ಷದೀಪೋತ್ಸವ, ಮಹದೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ.
    • ಜ.25: ಚಿತ್ರಕಲಾ ಸ್ಪರ್ಧೆ, ಭಜನಾ ಮೇಳ ಹಾಗೂ ದನಗಳ ಜಾತ್ರೆ ಸಮಾರೋಪ, ಕುಸ್ತಿ ಪಂದ್ಯಾವಳಿ, ತೆಪ್ಪೋತ್ಸವ.
    • ಜ.26: ಕೃಷಿಮೇಳ ಹಾಗೂ ವಸ್ತುಪ್ರದರ್ಶನ ಸಮಾರೋಪ, ಅನ್ನಬ್ರಹ್ಮೋತ್ಸವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts