More

  ಸಜ್ಜನಿಕೆಯ ಸಾಕಾರಮೂರ್ತಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ … ಬಡತನವಿರಲಿ, ಸಿರಿತನವಿರಲಿ, ಸೇವೆ ಮುಖ್ಯ: ಸುತ್ತೂರು ಶ್ರೀ

  ಬೆಂಗಳೂರು:
  ಬಡತನವಿರಲಿ, ಸಿರಿತನವಿರಲಿ, ಸೇವೆ ಎನ್ನುವುದು ಬಹಳ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟವರ ಬದುಕು ಸಾರ್ಥಕವಾಗುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಹೇಳಿದ್ದಾರೆ.
  ಸಜ್ಜನಿಕೆಯ ಸಾಕಾರಮೂರ್ತಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ಹೆಸರನಲ್ಲಿ ಅವರದೇ ಪ್ರತಿಷ್ಠಾನ ಹೊರತಂದಿರುವ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
  ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ನಾನಾ ಹಂತದ ಪದಾಧಿಕಾರಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಮಲ್ಲಿಕಾರ್ಜುನಯ್ಯ ಅವರ ಸೇವೆ ಅನನ್ಯವಾದದ್ದು ಎಂದು ಹೇಳಿದರು.
  ಬಡತನದಿಂದ ಬೆಳೆದು ಬಂದ ಮಲ್ಲಿಕಾರ್ಜುನಯ್ಯ ಅವರಲ್ಲಿದ್ದ ಶಿಸ್ತು, ದಕ್ಷತೆ, ಸಂಘಟನಾ ಕೌಶಲ್ಯ ಮತ್ತು ಕ್ರೀಯಾಶೀಲತೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
  ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಮಠದ ಭಕ್ತರಾಗಿದ್ದ ಮಲ್ಲಿಕಾರ್ಜುನಯ್ಯ ಅವರು ಧರ್ಮ ಪಾಲನೆಯ ಆಧಾರದ ಮೇಲೆ ಬದುಕು ಕಟ್ಟಿಕೊಂಡವರು ಎಂದರು.
  ನಾಡೋಜ ಗೊ.ರು.ಚನ್ನಬಸಪ್ಪ, ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ಮತ್ತಿತರರು ಮಾತನಾಡಿದರು.
  ಪ್ರೊ.ಮಾಳವಿಕಾ ಕಪೂರ್, ಸಾಹಿತಿ ಎಚ್.ಪಿ.ವಾಸುದೇವರಾವ್, ವನ್ಯಜೀವಿ ತಜ್ಞ ಡಾ.ಉಲ್ಲಾಸ್ ಕಾರಂತ್, ನಿವೃತ್ತ ಅಧಿಕಾರಿಗಳಾದ ಯು.ಶ್ರೀಧರಭಟ್, ಡಿ.ಎಸ್.ಮೃತ್ಯುಂಜಯ, ಪ್ರತಿಷ್ಠಾನದ ಕಾರ್ಯದರ್ಶಿ ಕೊಂಡಜ್ಜಿ ಷಣ್ಮುಖಪ, ಉಪಾಧ್ಯಕ್ಷ ಎಂ.ರೇಣುಕಾರಾಧ್ಯ, ಭೈರಂಸಂದ್ರ ಸಿದ್ಧಲಿಂಗಪ್ಪ ಹಾಜರಿದ್ದರು.

  See also  ನಾಡ ನಡುವಿನ ನೋವಿನ ಕೂಗು ಭೂಗರ್ಭದಲ್ಲಿ ಮೌನ: ಶ್ರೀನಿವಾಸ ಪ್ರಸಾದ್‌ಗೆ ಸಿದ್ದಲಿಂಗಯ್ಯ ಕವಿತೆಗಳ ಗೀತನಮನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts