More

    ನಿರಂತರ ಆದಾಯದಿಂದ ಅಭಿವೃದ್ಧಿ ಸಾಧ್ಯ

    ಮಾನ್ವಿ: ಗ್ರಾಮೀಣ ಭಾಗದ ಜನ ಅರ್ಥಿಕವಾಗಿ ಸಧೃಡರಾಗಲು ಕೃಷಿಗೆ ಪೂರಕವಾದ ಉಪ ಕಸುಬುಗಳಿಗೆ ಒತ್ತು ನೀಡಬೇಕು ಎಂದು ತರಬೇತುದಾರೆ ಶೈಲಜಾ ಹೇಳಿದರು.

    ಜಾನೆಕಲ್ ಗ್ರಾಪಂ ಕಚೇರಿ ಆವರಣದಲ್ಲಿ ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಎಸ್‌ಬಿಐ ಆರ್ಥಿಕ ಸಾಕ್ಷರತಾ ಕೇಂದ್ರ, ಆರೋಗ್ಯ ಇಲಾಖೆ, ತಾಪಂ ಆಶ್ರಯದಲ್ಲಿ ಸ್ವಯಂ ಉದ್ಯೋಗ ತರಬೇತಿ ಕುರಿತ ಜಾಗೃತಿ ಶಿಬಿರದಲ್ಲಿ ಮಂಗಳವಾರ ಮಾತನಾಡಿದರು.

    ಇದನ್ನೂ ಓದಿ: ಆದಾಯದ ಮೂಲ ಹೈನುಗಾರಿಕೆ
    ಗ್ರಾಮೀಣ ಪ್ರದೇಶದ ಪುರುಷರು ವೈಜ್ಞಾನಿಕವಾಗಿ ಹೈನುಗಾರಿಕೆ ಹಾಗೂ ಮಹಿಳೆಯರು ಫಾಸ್ಟ್ ಫುಡ್ ತಿನಿಸುಗಳ ತಯಾರಿಸಿದಲ್ಲಿ ನಿರಂತರ ಆದಾಯ ಪಡೆಯಲು ಸಾಧ್ಯ ಎಂದರು. ಆರ್ಥಿಕ ಸಾಕ್ಷರತಾ ಕೇಂದ್ರದ ಅಧಿಕಾರಿ ಚಂದ್ರಶೇಖರ ಸೊಪ್ಪಿಮಠ ಬ್ಯಾಂಕ್‌ಗಳಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

    ಆರೋಗ್ಯ ತಪಾಸಣೆ

    ಸಮುದಾಯ ಆರೋಗ್ಯಾಧಿಕಾರಿ ಸುಮಾ ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ತಾಲೂಕು ಐಇಸಿ ಸಂಯೋಜಕ ಈರೇಶ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಬಾಳಮ್ಮ, ಅಧಿಕಾರಿಗಳಾದ ಮರಿಲಿಂಗಣ್ಣ, ಕಿರಣ್ ಕುಮಾರ್, ಹನುಮಯ್ಯ, ಸಿದ್ದಪ್ಪ, ಆಶಾ ಕಾರ್ಯಕರ್ತೆಯರಾದ ನಾಗರತ್ನ, ಹನುಮಂತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts