ಕಲಬುರಗಿ: ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದ ಯುವತಿ ನವವಿವಾಹಿತೆಯ ಶವವು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಕಲಬುರಗಿ ನಗರದ ರಾಜಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿ ಮೂರೇ ತಿಂಗಳಿಗೆ 23 ವರ್ಷದ ರಮಾಬಾಯಿ ಎಂಬುವರು ಮೃತಪಟ್ಟಿದ್ದಾರೆ.
ರಮಾಬಾರಿ ರಾಹುಲ್ ಎಂಬುವ ಯುವಕನನ್ನು ಪ್ರೀತಿಸಿದ್ದಳು. ರಾಹುಲ್ ರಮಾಬಾಯಿಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ. ಆದರೆ ಬಳಿಕ ಗಂಡನ ಮನೆಯಲ್ಲಿ ನಿತ್ಯ ಕಿರುಕುಳಕ್ಕೆ ಒಳಗಾಗಿದ್ದಳು. ರಮಾಬಾಯಿಗೆ ಜಾತಿ ನಿಂದನೆ ಮಾಡಿ ಅತ್ತೆ-ಮಾವ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ನಿನ್ನೆ ಸಂಜೆ ಗಂಡನ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಕ್ರೈಂ ಧಾರಾವಾಹಿ ನೋಡಿ ವೃದ್ಧೆಯ ಕೊಲೆ ಮಾಡಿದ ಬಾಲಕರು! ಲಕ್ಷಾಂತರ ರೂ. ದೋಚಿ ಸಿಕ್ಕಿಬಿದ್ದರು
ಗಂಡನ ಮನೆಯವರೇ ರಮಾಬಾಯಿಯನ್ನು ಕೊಲೆ ಮಾಡಿರುವುದಾಗಿ ಅವಳ ಕುಟುಂಬಸ್ಥರು ಆರೋಪಿಸಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ.
ಬಿಗಡಾಯಿಸಿದ ರಾಜಧಾನಿಯ ವಾಯು ಪರಿಸರ; ದೀಪಾವಳಿ ಪಟಾಕಿಗಳಿಂದ ಮತ್ತಷ್ಟು ಮಾಲಿನ್ಯ
ಕುಳಿತಲ್ಲಿಂದಲೇ ದೆಹಲಿಯ ಮಾರುಕಟ್ಟೆಯಲ್ಲಿ ಶಾಪಿಂಗ್! ಕೇಜ್ರಿವಾಲ್ರ ಹೊಸ ಯೋಜನೆ