More

    ಶಂಕಿತ ಉಗ್ರರು ಹತ್ತು ದಿನ ಸಿಸಿಬಿ ಕಸ್ಟಡಿಗೆ

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸುವುದು ಮತ್ತು ಹಿಂದು ಮುಖಂಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಶಂಕಿತ ಉಗ್ರರನ್ನು ನ್ಯಾಯಾಲಯ ಸಿಸಿಬಿ ವಶಕ್ಕೆ ಒಪ್ಪಿಸಿದೆ.

    ಶುಕ್ರವಾರ ಬೆಳಗ್ಗೆ 52ನೇ ಸಿಸಿಎಚ್ ವಿಶೇಷ ನ್ಯಾಯಾಲಯಕ್ಕೆ ಬಂಧಿತ ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್, ಜಬಿವುಲ್ಲಾ ಮತ್ತು ಸಯ್ಯದ್ ಅಜ್ಮತ್ತುಲ್ಲಾನನ್ನು ಹಾಜರು ಪಡಿಸಿ ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್ ಶಂಕಿತರನ್ನು 10 ದಿನ ಕಸ್ಟಡಿಗೆ ಒಪ್ಪಿಸಿ ವಿಚಾರಣೆ ಮುಂದೂಡಿದೆ. ತಮಿಳುನಾಡು ಪೊಲೀಸರ ವಶದಲ್ಲಿರುವ ಅಲ್ ಉಮ್ಮಾ ಸಂಘಟನೆ ಉಗ್ರ ಮೊಯಿದ್ದೀನ್ ಕ್ವಾಜಾ, ವಿದೇಶಿ ಉಗ್ರರ ಜತೆ ನಿಕಟ ಸಂರ್ಪಕ ಹೊಂದಿದ್ದ. ಈತನೇ ಗುರಪ್ಪನಪಾಳ್ಯದ ಮೆಹಬೂಬ್ ಪಾಷಾನನ್ನು ಬೆಂಗಳೂರಿಗೆ ಕಮಾಂಡರ್ ಆಗಿ ನೇಮಕ ಮಾಡಿ, ಹಣ ಪೂರೈಕೆ ಮಾಡುತ್ತಿದ್ದ. ಮೆಹಬೂಬ್ ಪಾಷಾಗೆ ದಕ್ಷಿಣ ಭಾರತದ ಜವಾಬ್ದಾರಿ ವಹಿಸಿ ಪಾಕಿಸ್ತಾನಕ್ಕೆ ತೆರಳಲು ಕ್ವಾಜಾ ಪ್ಲಾ್ಯನ್ ಮಾಡಿದ್ದ. ಅದಕ್ಕಾಗಿ ಮೆಹಬೂಬ್ ಪಾಷಾ, ನಕಲಿ ಐಡಿ ಕಾರ್ಡ್ ಸೃಷ್ಟಿಸಿ ಕ್ವಾಜಾಗೆ ನೀಡಿದ್ದ. ಇದನ್ನು ಬಳಸಿಕೊಂಡು ನೇಪಾಳದಿಂದ ಪಾಕಿಸ್ತಾನ ಸೇರಲು ಮುಂದಾದಾಗ ದೆಹಲಿ ಪೊಲೀಸರು ನೇಪಾಳ ಗಡಿಯಲ್ಲಿ ಕ್ವಾಜಾನನ್ನು ಬಂಧಿಸಿದ್ದಾರೆ.

    ಮಾಹಿತಿ ನೀಡಲು ನಕಾರ: ಪ್ರಕರಣವನ್ನು ತಮಿಳುನಾಡು, ದೆಹಲಿ, ಕರ್ನಾಟಕ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿವೆ. ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts