More

    ಶಂಕಿತ ಉಗ್ರರು ಸಿಸಿಬಿ ವಶಕ್ಕೆ

    ಬೆಂಗಳೂರು: ಹಿಂದುಪರ ಮುಖಂಡರ ಹತ್ಯೆ ಹಾಗೂ ವಿಧ್ವಂಸಕ ಕೃತ್ಯ ಎಸಗಲು ಗುರಪ್ಪನಪಾಳ್ಯದ ಮನೆಯಲ್ಲಿ ಸಭೆ ನಡೆಸಿ ಸಂಚು ರೂಪಿಸಿ ಬಂಧಿತ ಐಸಿಸ್ ಸಂಘಟನೆಯ ಐವರು ಶಂಕಿತ ಉಗ್ರರನ್ನು 7 ದಿನಗಳವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಿ ಎನ್​ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

    ಐಸಿಸ್​ನ ಶಂಕಿತ ಉಗ್ರ ಮೆಹಬೂಬ್ ಪಾಷಾ, ಕೋಲಾರದ ಸಲೀಂ, ಮೊಹಮದ್ ಮನ್ಸೂರ್, ಜಬೀವುಲ್ಲಾ ಹಾಗೂ ಸಯ್ಯದ್ ಅಜ್ಮತ್ತುಲ್ಲಾ ಬಂಧಿತರು. ಸೋಮವಾರ (ಜ.27) ಕಸ್ಟಡಿ ಅವಧಿ ಮುಗಿದಿತ್ತು. ಈ ಹಿನ್ನೆಲೆ ಐವರು ಶಂಕಿತ ಉಗ್ರರನ್ನು ಮಧ್ಯಾಹ್ನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ ಕೊಡುವಂತೆ ಮನವಿ ಮಾಡಿದರು. ನ್ಯಾಯಾಧೀಶ ವೆಂಕಟೇಶ್ ಆರ್. ಹುಲಗಿ ಫೆ.3ರವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಿ ಆದೇಶಿಸಿದರು.

    ಗುಂಡ್ಲುಪೇಟೆಗೆ ಕರೆದೊಯ್ಯುವ ಸಾಧ್ಯತೆ?: ಬಂಧಿತ ಶಂಕಿತ ಉಗ್ರರು ತಮ್ಮ ಕಾರ್ಯಾ ಚಟುವಟಿಕೆಗಳಿಗೆ ಗುಂಡ್ಲುಪೇಟೆಯಲ್ಲಿ ನಿವೇಶನ ಖರೀದಿಗೆ ಮುಂದಾಗಿದ್ದರು ಎಂಬ ಆತಂಕಕಾರಿ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಐಸಿಸ್​ನ ಶಂಕಿತ ಉಗ್ರ ಮೆಹಬೂಬ್ ಪಾಷಾ ಮತ್ತು ಅವನ ಸಹಚರರನ್ನು ಗುಂಡ್ಲುಪೇಟೆ, ಕೋಲಾರಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಗುಂಡ್ಲುಪೇಟೆಯ ಯಾವ ಭಾಗದಲ್ಲಿ ಭೂಮಿ ಖರೀದಿಸಲು ಮುಂದಾಗಿದ್ದರು. ಭೂಮಿ ಖರೀದಿಗೆ ಯಾರನ್ನೆಲ್ಲ ಸಂರ್ಪಸಿ ವ್ಯವಹಾರ ಕುದುರಿಸಿದ್ದರು ಎಂಬ ಮಾಹಿತಿ ಗೊತ್ತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts