ಭಾವಿ ಪತಿ ರೋಹನ್​ ಶಾಲ್​ ಜತೆ ಮಾಲ್ಡೀವ್ಸ್​ನಲ್ಲಿ ಸುಷ್ಮಿತಾ ರಜೆಯ ಮೋಜು, ಕಪ್ಪು ಬಿಕಿನಿಯಲ್ಲಿ ಮಿಂಚಿದ ಮಿಂಚುಳ್ಳಿ!

ಮುಂಬೈ: ತಮ್ಮ ಸೌಂದರ್ಯದಿಂದಲೇ ವಿಶ್ವವನ್ನೇ ಗೆದ್ದಿದ್ದ ಸುಷ್ಮಿತಾ ಸೇನ್​ ಸದ್ಯ ಪ್ರೇಮಪಾಶದಲ್ಲಿ ಸಿಲುಕಿಕೊಂಡಿದ್ದಾರೆ. ರೋಹನ್​ ಶಾಲ್​ ಅವರನ್ನು ವರಿಸುವುದಾಗಿ ಹೇಳಿಕೊಂಡಿರುವ ಅವರು ಇದೀಗ ತಮ್ಮ ಭಾವಿ ಪತಿ ಜತೆ ಮಾಲ್ಡೀವ್ಸ್​ನಲ್ಲಿ ರಜೆಯ ಮೋಜಿನಲ್ಲಿ ತೊಡಗಿದ್ದಾರೆ.

ಕಪ್ಪು ಬಿಕಿನಿಯಲ್ಲಿ ರೋಹನ್​ ಎದೆಯ ಮೇಲೊರಗಿ ತಮ್ಮ ದೇಹಸೌಂದರ್ಯವನ್ನು ಅನಾವರಣಗೊಳಿಸಿರುವ ಮಾಜಿ ಭುವನಸುಂದರಿ ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ #love ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್​ಗೆ ಸುಷ್ಮಿತಾ ಅವರ ಭಾವಿ ಪತಿ ರೋಹನ್​ ಕೂಡ “bliss #love” ಎಂದು ಪ್ರತಿಕ್ರಿಯಿಸಿ, ಭಾವಿ ಪತ್ನಿಯ ಪ್ರೀತಿಗೆ ಪ್ರತಿಪ್ರೀತಿ ತೋರಿದ್ದಾರೆ.

ಇದು ಸಾಲದು ಎಂಬಂತೆ ಮಾಲ್ಡೀವ್ಸ್​ ಕ್ರೂಸ್​ನ ಹಡಗಿನಲ್ಲಿ ಮತ್ತೊಂದು ಪೋಸ್ ​ ಕೊಟ್ಟಿದ್ದು ಇದಕ್ಕೆ, ಫೀನಿಕ್ಸ್​ ಹಕ್ಕಿಯ ಪುಟಿದೇಳುವ ಸ್ಫೂರ್ತಿ ಮೈದುಂಬಿಕೊಳ್ಳಲು ಚಿಮ್ಮುಹಲಗೆಯ ಪರಿವರ್ತನೀಯ ಶಕ್ತಿಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯ!! ಎಂಬ ಶೀರ್ಷಿಕೆ ನೀಡಿದ್ದಾರೆ. ಜತೆಗೆ #phoenix #ricochet #reborn #transformation #undyingspirit I love you guys!!! #soar ಎಂಬ ಟ್ಯಾಗ್ಸ್​ ಅನ್ನು ನೀಡಿದ್ದಾರೆ.

ಶ್ರೀಜಿತ್​ ಮುಖರ್ಜಿ ಅವರ ನಿಬಾಕ್​ ಎಂಬ ಬೆಂಗಾಳಿ ಚಿತ್ರದಲ್ಲಿ ಕಾಣಿಸಿಕೊಂಡ ನಂತರದಲ್ಲಿ ಸುಷ್ಮಿತಾ ಬೇರಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹಾಗೆಂದು ಅವರೇನೂ ನಿವೃತ್ತಿ ಘೋಷಿಸಿಲ್ಲ. ಆದರೆ, ತಮಗೆ ಇಷ್ಟವಾಗುವಂಥ ಕಥೆಗಳು ಬಂದರೆ ಒಪ್ಪಿಕೊಳ್ಳಲು ಸಿದ್ಧ ಎಂಬುದು ಮೈ ಹೂ ನಾ ಬಾಲಿವುಡ್​ ಚಿತ್ರದ ನಟಿಯ ಅಂಬೋಣ. ಇಷ್ಟೆಲ್ಲದರ ನಡುವೆ ಅವರೀಗ ರೋಹನ್​ ಶಾಲ್​ ಜತೆ ಸಪ್ತಪದಿ ತುಳಿದು ಜೀವನದಲ್ಲಿ ನೆಲೆಗೊಳ್ಳುವ ನಿಟ್ಟಿನಲ್ಲಿ ಗಮನಹರಿಸಿದ್ದಾರೆ. ಇದಕ್ಕೆ ಸರಿಯಾಗಿ ಅವರ 5ನೇ ತರಗತಿಯಲ್ಲಿರುವ ಅವರ ಸಾಕುಮಗಳು ಆಲಿಷಾ ವಿದೇಶದ ಬೋರ್ಡಿಂಗ್​ ಶಾಲೆಯಲ್ಲಿ 6ನೇ ತರಗತಿಯಿಂದ ಓದು ಮುಂದುವರಿಸುವ ಬಯಕೆ ತೋರಿದ್ದಾಳೆ.

ಇತ್ತೀಚೆಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ವಿಷಯ ಹೇಳಿಕೊಂಡಿರುವ ಸುಷ್ಮಿತಾ, ಇಷ್ಟು ದಿನ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸುತ್ತಿದ್ದೆ. ಇದೀಗ ಆಕೆ ಬೋರ್ಡಿಂಗ್​ ಸ್ಕೂಲ್​ನಲ್ಲಿ ಓದಲು ತೆರಳುತ್ತಿದ್ದಾಳೆ. ಹಾಗಾಗಿ ಈಗ ನನ್ನ ಬಳಿ ಸಮಯಕ್ಕೇನೂ ಕೊರತೆ ಇಲ್ಲ, ಸಂಸಾರ ನೌಕೆಯಲ್ಲಿ ಆರಾಮವಾಗಿ ಪ್ರಯಾಣಿಸಬಹುದು ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *