ಲಲಿತ್ ಮೋದಿ-ಸುಶ್ಮಿತಾ ಸೇನ್​ ಡೇಟಿಂಗ್​; ಸುಶ್ಮಿತಾ ತಂದೆ ಹೇಳಿದ್ದೇನು?

blank

ಕೋಲ್ಕತ: ಐಪಿಎಲ್​ನ ಮಾಜಿ ಚೇರ್ಮನ್​ ಲಲಿತ್ ಮೋದಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್​ ಡೇಟಿಂಗ್ ವಿಚಾರ ನಿನ್ನೆಯಿಂದ ಭಾರಿ ಸದ್ದು ಮಾಡುತ್ತಿದ್ದು, ಆ ಕುರಿತು ನಟಿಯ ಮಾಜಿ ಪ್ರಿಯಕರ ಮಾತ್ರವಲ್ಲದೆ ಇದೀಗ ಆಕೆಯ ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸುಷ್ಮಿತಾ ಜತೆ ಹಲವು ವರ್ಷಗಳ ಕಾಲ ಡೇಟಿಂಗ್​ ನಡೆಸಿದ್ದ ರೊಹಮನ್​ ಶಾಲ್, ನಾವು ಅವರಿಗಾಗಿ ಸಂತೋಷವಾಗಿರೋಣ, ಪ್ರೀತಿ ಸುಂದರವಾಗಿದೆ, ಆಕೆ ಯಾರನ್ನಾದರು ಆರಿಸಿದ್ದರೆ ಅವರು ಯೋಗ್ಯನೇ ಆಗಿರುತ್ತಾನೆ ಎಂದಿದ್ದಾರೆ.

ಮತ್ತೊಂದೆಡೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಸುಶ್ಮಿತಾ ತಂದೆ, ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಷಬ್ಬೀರ್​ ಸೇನ್​, ಲಲಿತ್ ಮೋದಿ ಜತೆ ಪುತ್ರಿಯ ಡೇಟಿಂಗ್​ಗೆ ಸಂಬಂಧಿಸಿದಂತೆ ತನಗೇನೂ ವಿಷಯವೇ ಗೊತ್ತಿಲ್ಲ ಎಂಬುದಾಗಿ ಹೇಳಿದ್ದಾರೆ.

ಈ ಬೆಳವಣಿಗೆ ಕುರಿತು ನಂಗೆ ಯಾವುದೇ ಮಾಹಿತಿ ಇಲ್ಲ. ಇಂದು ಬೆಳಗ್ಗೆ ಪುತ್ರಿ ಜತೆ ಫೋನ್​ನಲ್ಲಿ ಮಾತನಾಡಿದ್ದೆ. ಆಕೆ ಈ ಕುರಿತು ಏನನ್ನೂ ಹೇಳಿಲ್ಲ. ಅದೊಂದು ಸಾಮಾನ್ಯ ಸಂಭಾಷಣೆ ಆಗಿತ್ತು ಮತ್ತು ಆ ಮಾತುಕತೆಯಲ್ಲಿ ಎಲ್ಲೂ ಲಲಿತ್ ಮೋದಿಯ ಪ್ರಸ್ತಾಪವಾಗಿಲ್ಲ ಎಂದು ಷಬ್ಬೀರ್​ ಹೇಳಿದ್ದಾರೆ.

ಅಂಥದ್ದೇನಾದರೂ ಆಗಿದ್ದರೆ ಅದು ನಿಜವಾಗಿಯೂ ನನ್ನ ಪುತ್ರಿಯ ಬದುಕಿನಲ್ಲಿ ಒಂದು ಮಹತ್ವದ ತಿರುವು. ಅದರ ಕುರಿತು ನನಗೆ ಮುಂದೆ ಗೊತ್ತಾಗುತ್ತದೆ. ಆದರೆ ಈಗಂತೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವ ಷಬ್ಬೀರ್, ಲಲಿತ್ ಮೋದಿ ಟ್ವೀಟ್​ ಬಗ್ಗೆ ಮಾಧ್ಯಮದವರಿಂದಾಗಿ ತಿಳಿಯಿತು ಎಂದಿದ್ದಾರೆ.

ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..

ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

Share This Article

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…

ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್​ ಟ್ರಿಕ್ಸ್​ ​ | Health Tips

ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…