ಆಕೆ ಸುಶಾಂತ್​ನ ಗೆಳತಿಯೂ ಅಲ್ಲ; ಪ್ರತಿನಿಧಿಯೂ ಅಲ್ಲ …

1 Min Read
ಆಕೆ ಸುಶಾಂತ್​ನ ಗೆಳತಿಯೂ ಅಲ್ಲ; ಪ್ರತಿನಿಧಿಯೂ ಅಲ್ಲ ...

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದು ಕಂಗನಾ ರಣಾವತ್. ಸುಶಾಂತ್ ಸಾವಿಗೆ ಕಾರಣ ಬಾಲಿವುಡ್ ಮಾಫಿಯಾ ಮತ್ತು ನೆಪೋಟಿಸಂ (ಸ್ವಜನಪಕ್ಷಪಾತ) ಕಾರಣ ಎಂದು ಮೊದಲು ಧ್ವನಿ ಎತ್ತಿದವರೇ ಅವರು. ಆ ನಂತರ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಈಗಲೂ ಸಹ ಕಂಗನಾ ಈ ವಿಷಯಗಳ ಬಗ್ಗೆ ಮಾತಾಡುವುದಷ್ಟೇ ಅಲ್ಲ, ಹಲವರಿಗೆ ಬೆವರಿಳಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಭಾಸ್​ ಚಿತ್ರಗಳ ಮೇಲೆ ಹೂಡಿಕೆಯಾಗಿರುವ ಮೊತ್ತ 950 ಕೋಟಿಯಂತೆ!

ಆದರೆ, ಕಂಗನಾ ಇಷ್ಟೆಲ್ಲಾ ಮಾಡುತ್ತಿರುವುದು ತಮ್ಮ ಸ್ವಹಿತಾಸಕ್ತಿಗೇ ಹೊರತು, ಇದರಿಂದ ಸುಶಾಂತ್ ಅವರ ಸಾವಿಗೆ ಯಾವುದೇ ಸಂಬಂಧವಿಲ್ಲ, ಇಲ್ಲಿ ಸುಶಾಂತ್ ಸಾವಿಗೆ ನ್ಯಾಯ ಸಿಗುವುದಕ್ಕೆ ಹೋರಾಡುವುದಕ್ಕಿಂತ ಹೆಚ್ಚಾಗಿ, ಆಕೆ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹೋರಾಡುತ್ತಿದ್ದಾರೆ ಎಂದು ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಕಂಗನಾ, ಸುಶಾಂತ್ ಅವರ ಗೆಳತಿಯಲ್ಲ. ಪ್ರತಿನಿಧಿಯೂ ಅಲ್ಲ. ಆಕೆ ಚಿತ್ರರಂಗದಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆಕೆ ಮಾತನಾಡುತ್ತಿರುವ ವಿಷಯ ಸರಿ ಇರಬಹುದು. ಆದರೆ, ಅದಕ್ಕೂ ಸುಶಾಂತ್ ಅವರ ಸಾವಿಗೂ ಸಂಬಂಧವಿಲ್ಲ. ಸುಶಾಂತ್‍ಗೂ ನೆಪೋಟಿಸಂನ ಬಿಸಿ ತಟ್ಟಿರಬಹುದು. ಅದೇ ಅವರ ಸಾವಿಗೆ ಕಾರಣ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ’ ಎಂದು ವಿಕಾಸ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಹಾಗಾದ್ರೆ ನಮ್​ ಮಕ್ಳು ಕನಸು ಕಾಣಬಾರ್ದಾ? ಸುನೀಲ್​ ಶೆಟ್ಟಿ ಪ್ರಶ್ನೆ

`ಕಂಗನಾಗೆ ಯಾರ್ಯಾರ ಬಗ್ಗೆ ಅಸಹನೆ ಇತ್ತೋ, ಅವರನ್ನು ಅಟ್ಯಾಕ್ ಮಾಡುವುದಕ್ಕೆ ಈ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ. ಆಕೆಯ ವಾದಕ್ಕೂ, ಕುಟುಂಬದವರ ವಾದಕ್ಕೂ ಯಾವುದೇ ಸಂಬಂಧವಿಲ್ಲ. ಕಂಗನಾ ಹೇಳುತ್ತಿರುವ ನೆಪೋಟಿಸಂ, ಸುಶಾಂತ್ ಸಾವಿಗೆ ಪ್ರಮುಖ ಕಾರಣವಲ್ಲ. ಇಡೀ ಕೇಸ್ ಇರುವುದು ರಿಯಾ ಮತ್ತು ತಂಡದವರು ಸುಶಾಂತ್ ಅವರನ್ನು ಹೇಗೆ ಬಳಸಿಕೊಂಡರು ಮತ್ತು ಅವರ ಸಾವಿಗೆ ಕಾರಣರಾದರು ಎಂಬ ವಿಷಯದ ಬಗ್ಗೆ’ ಎಂದು ವಿಕಾಸ್ ಸಿಂಗ್ ಹೇಳಿದ್ದಾರೆ.

See also  ಹಿರಿಯ ನಟ ಶಿವರಾಂ ತಲೆಗೆ ಪೆಟ್ಟು, ಆರೋಗ್ಯ ಸ್ಥಿತಿ ಗಂಭೀರ

ಸುಶಾಂತ್ ಪ್ರಕರಣ ಸಿಬಿಐ ತನಿಖೆ ಆರಂಭ

Share This Article