More

  ಜ್ಯೋತಿಕಾ ಆಯ್ತು; ಈಗ ಸೂರ್ಯ ಸಿನಿಮಾ ಸಹ ಓಟಿಟಿಯಲ್ಲಿ …

  ಕೆಲವೇ ದಿನಗಳ ಹಿಂದಿನ ಮಾತು. ಕಾಲಿವುಡ್ ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಅವರ `ಪೊನ್ಮಗಳ್ ವಂದಾಳ್’ ಎಂಬ ಸಿನಿಮಾ ಅಮೇಜಾನ್‍ನಲ್ಲಿ ಬಿಡುಗಡೆಯಾಯಿತು. ಅದಕ್ಕೂ ಮುನ್ನ ಚಿತ್ರವನ್ನು ಓವರ್ ದಿ ಟಾಪ್‍ನಲ್ಲಿ (ಓಟಿಟಿ) ಬಿಡುಗಡೆ ಮಾಡಿದರೆ, ತಮ್ಮ ಗತಿ ಏನು ಎಂದು ತಮಿಳುನಾಡಿನ ಚಿತ್ರಮಂದಿರದ ಮಾಲೀಕರು ತಗಾದೆ ತೆಗೆದರು. ಒಂದು ಪಕ್ಷ ಜ್ಯೋತಿಕಾ ಅಭಿನಯದ ಸಿನಿಮಾ ಬಿಡುಗಡೆ ಮಾಡಿದರೆ, ನಾಳೆ ಅವರ ಪತಿ ಸೂರ್ಯ ಅವರ ಚಿತ್ರಗಳನ್ನೂ ಬ್ಯಾನ್ ಮಾಡುವುದಾಗಿ ಚಿತ್ರಮಂದಿರದವರು   ಬೆದರಿಕೆ ಹಾಕಿದ್ದರು.

  ಇದನ್ನೂ ಓದಿ: ಚಂದನ್ ಶೆಟ್ಟಿ ಕಂಠದಲ್ಲಿ ಹೊಸ `ಕೋಲು ಮಂಡೆ’ …

  ಆದರೆ, ಸೂರ್ಯ ಸಮಾಧಾನದಿಂದ ಎಲ್ಲರಿಗೂ ಉತ್ತರ ಕೊಟ್ಟರು. ಜ್ಯೋತಿಕಾ ಸಿನಿಮಾಗಳು ಬೇರೆ, ತಮ್ಮ ಸಿನಿಮಾಗಳು ಬೇರೆ ಎಂದರು. ತಮ್ಮ ಚಿತ್ರಗಳು ಮಾಸ್ ಚಿತ್ರಗಳಾದ್ದರಿಂದ, ಅದನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಅಷ್ಟೇ ಅಲ್ಲ, `ಸೂರಾರೈ ಪೋಟ್ರು’ ತಮ್ಮ ಹೊಸ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ, ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

  ಆದರೆ, ಇದೀಗ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಶುರುವಾಗುವುದು ವಿಳಂಬವಾಗುತ್ತಿರುವುದರಿಂದ ಸೂರ್ಯ ಸಹ ಓಟಿಟಿಯಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನವನ್ನಾಧರಿಸಿದ `ಸೂರಾರೈ ಪೋಟ್ರು’ ಚಿತ್ರವನ್ನು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗ ಚಿತ್ರವು ಅಕ್ಟೋಬರ್ 30ರಂದು ಸ್ಟ್ರೀಮ್ ಆಗಲಿದೆ.

  ಗಣೇಶ ಚತುರ್ಥಿಯಂದು, ಚಿತ್ರದ ಓಟಿಟಿ ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸೂರ್ಯ, `ಈ ಚಿತ್ರ ಏಪ್ರಿಲ್‍ನಲ್ಲೇ ಬಿಡಗುಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್‍ಡೌನ್‍ನಿಂದ ಚಿತ್ರ ಬಿಡುಗಡೆ ತಡವಾಯಿತು. ಕರೊನಾ ಹಾವಳಿಯಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ವಿಳಂಬವಾಗುತ್ತಿರುವುದರಿಂದ, ಚಿತ್ರ ಅಕ್ಟೋಬರ್ 30ರಂದು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಹೊಸ `ಮಾರ್ಗ’ದಲ್ಲಿ `ಆ ದಿನಗಳು’ ಚೇತನ್!

  ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ಜತೆಗೆ ಮೋಹನ್ ಬಾಬು, ಪರೇಶ್ ರಾವಲ್, ಅಪರ್ಣಾ ಬಾಲಮುರಳಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜತಗೆ, ಚಿತ್ರದ ನಿರ್ಮಾಣದಲ್ಲೂ ಸೂರ್ಯ ತೊಡಗಿಸಿಕೊಂಡಿದ್ದಾರೆ.

  ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts