VIDEO: ಧೋನಿ ಶೈಲಿಯಲ್ಲಿ ಸೂರ್ಯಕುಮಾರ್​ರಿಂದ ಸೂಪರ್​ ಹೆಲಿಕಾಪ್ಟರ್​ ಶಾಟ್​!

ನವದೆಹಲಿ: ಹೆಲಿಕಾಫ್ಟರ್​ ಶಾಟ್​ ಎಂದಾಗಲೇ ತಕ್ಷಣ ನೆನಪಿಗೆ ಬರುವುದು ಎಂ.ಎಸ್​. ಧೋನಿ. ಕೂಲ್​ ಕ್ಯಾಪ್ಟನ್​ ಬ್ಯಾಟ್​ನಿಂದ ಹೆಲಿಕಾಪ್ಟರ್​ ಶಾಟ್​ ಸಿಡಿದರೆ ಬಾಲ್​ ಬೌಂಡರಿ ಗೆರೆ ದಾಟುವುದು ಖಂಡಿತ. ಇದೀಗ ಧೋನಿ ಮಾದರಿಯಲ್ಲೇ ಯುವ ಆಟಗಾರ ಸಿಕ್ಸರ್​ ಬಾರಿಸಿರುವುದು ಕ್ರೀಡಾಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.

ಶನಿವಾರ ಇಂಡಿಯಾ ಬಿ ಹಾಗೂ ಇಂಡಿಯಾ ಸಿ ನಡುವೆ ನಡೆದ ದೇವಧರ್ ಟ್ರೋಫಿಯ ಫೈನಲ್​ ಹಣಾಹಣಿಯಲ್ಲಿ ಇಂಡಿಯಾ ಸಿ ಪರ ಆಡಿದ ಯುವ ಆಟಗಾರ ಸೂರ್ಯಕುಮಾರ್​ ಯಾದವ್​ ಮಂಡಿಯೂರಿ ಹೆಲಿಕಾಫ್ಟರ್​ ಶಾಟ್​ ಬಾರಿಸುವ ಮೂಲಕ ಗಮನಸೆಳೆದರು. ಕೇವಲ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ 39 ರನ್​ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಡಿಯಾ ಸಿ ಅಜಿಂಕ್ಯಾ ರಹಾನೆ(144*) ಹಾಗೂ ಇಸಾನ್​ ಕಿಶಾನ್​(114) ಆಟದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 352 ರನ್ ಗಳಿಸಿತು.

ಗುರಿ ಬೆನ್ನತ್ತಿದ ಇಂಡಿಯಾ ಬಿ 46.1 ಓವರ್​ಗಳಲ್ಲಿ 323 ರನ್​ ಆಲೌಟ್​ ಆಯಿತು. ತಂಡದ ಪರ ಶ್ರೇಯಸ್​ ಅಯ್ಯರ್​(148) ಹಾಗೂ ರುತುರಾಜ್​ ಗಾಯಕ್​ವಾಡ್​(60) ರನ್​ ಗಳಿಸಿದರು. (ಏಜೆನ್ಸೀಸ್​)

https://twitter.com/ghanta_10/status/1056226822109782017