ಹರಿಹರ: ಸಾಮೂಹಿಕ 108 ಸೂರ್ಯ ನಮಸ್ಕಾರವು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ದಾವಣಗೆರೆ ವಲಯ ಸಂಚಾಲಕ ಸತೀಶ್ ತಿಳಿಸಿದರು.
ನಗರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿಯಿಂದ ರಥ ಸಪ್ತಮಿ ಹಿನ್ನೆಲೆ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಹಾಗೂ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರಿಹರೇಶ್ವರ ದೇವಸ್ಥಾನದ ಪುಣ್ಯ ಪಾವನ ಭೂಮಿಯಲ್ಲಿ ಮಾಡಿದ ಅಭ್ಯಾಸ ವಿಶೇಷ ಮತ್ತು ವಿಸ್ಮಯ ಅನುಭವ ಎಂದರು.
ಯೋಗ ಶಿಕ್ಷಕಿ ಲೀಲಕ್ಕ, ಸಂಚಾಲಕ ಶಂಕರಣ್ಣ ಸೇರಿ 115 ಪುರುಷರು ಹಾಗೂ 95 ಮಹಿಳೆಯರು ಭಾಗವಹಿಸಿದ್ದರು.