20.3 C
Bangalore
Sunday, December 15, 2019

ಮಾಂಜರಿ: ಬದುಕುಳಿದ ಕಬ್ಬಿಗೆ ಭಾರಿ ಬೇಡಿಕೆ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ಮಾಂಜರಿ: ಗಡಿಭಾಗದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಭಾರಿ  ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದರಿಂದ ಈ ವರ್ಷ ವಾಣಿಜ್ಯ ಬೆಳೆ ಕಬ್ಬಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ.

ಚಿಕ್ಕೋಡಿ ತಾಲೂಕಿನಲ್ಲಿ ಪಂಚ ನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷವಿದ್ದರೂ ಪ್ರಸಕ್ತ ಸಾಲಿನ ಭೀಕರ ಬರಗಾಲದಿಂದ ಶೇ22.ರಷ್ಟು ನೀರಿನ ಅಭಾವದಿಂದ ಬೆಳೆ ಒಣಗಿ ಹೋಗಿದ್ದವು. ಇದರ ಬೆನ್ನಲ್ಲೇ ಪ್ರವಾಹ ಬಂದು ಶೇ.42ರಷ್ಟು ಕಬ್ಬು ನಾಶವಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ 126949 ಹೆಕ್ಟೇರ್ ಭೂಮಿ ಪೈಕಿ 59,491 ಹೆಕ್ಟೇರ್ ಕಬ್ಬು ಬೆಳೆದಿದ್ದರು. ಇದರಲ್ಲಿ ಬರಗಾಲದಿಂದ 13,000 ಹೆಕ್ಟೇರ್ ಹಾಗೂ ಪ್ರವಾಹದಿಂದಾಗಿ 23,610 ಹೆಕ್ಟೇರ್ ಕಬ್ಬು ನಾಶವಾಗಿದೆ. ಹಾಗಾಗಿ ಬದುಕುಳಿದ ಕಬ್ಬಿಗೆ ಬಂಗಾರದ ಬೆಲೆ ಬರಲಿದೆ ಎನ್ನಲಾಗುತ್ತಿದೆ.

ಕಬ್ಬು ನುರಿಸುವ ಹಂಗಾಮು ಆರಂಭಿಸಿ: ಈ ವರ್ಷದ ಬರಗಾಲ, ಮಳೆ ಮತ್ತು ನೆರೆ ಬಂದು ಕಬ್ಬು ಬೆಳೆಗಾರರಿಗೆ ಬಿಸಿ ಮುಟ್ಟಿಸಿದೆ. ಕಬ್ಬು ನಾಟಿಯಿಂದ ಕಟಾವು ಮಾಡುವವರೆಗೆ ರೈತರು ನಷ್ಟವನ್ನೇ ಅನುಭವಿಸುತ್ತಿದ್ದಾರೆ. ಈಗ ಚಿಕ್ಕೋಡಿ ತಾಲೂಕಿನ ಕೆಲ ಭಾಗದ ರೈತರು ಸಂಪೂರ್ಣವಾಗಿ ಕಬ್ಬು ಬೆಳೆ ಕಳೆದುಕೊಂಡಿದ್ದಾರೆ. ಆದರೆ, ಬದುಕುಳಿದ ಕಬ್ಬನ್ನು ಹಾಗೂ ನೀರಿನಲ್ಲಿ ಮುಳುಗಡೆಯಾದ ಕಬ್ಬು ಒಣಗುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಆದಷ್ಟು ಬೇಗ ಆರಂಭಿಸಿದರೆ ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ. ನೆರೆ ಕೊಲ್ಲಾಪುರ ಹಾಗೂ ಸಾಂಗಲಿ ಜಿಲ್ಲೆಯ ಜತೆಗೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಕಲ್ಲೋಳ, ಯಡೂರ, ಮಾಂಜರಿ, ಇಂಗಳಿ, ಅಂಕಲಿ, ಚಂದೂರ, ಸದಲಗಾ, ಬೇಡಕಿಹಾಳ, ಶಮನೇವಾಡಿ, ಕಾರದಗಾ, ಭೋಜ, ಬಾರವಾಡ, ಮಾಂಗೂರ, ಕುನ್ನುರ, ಹುನ್ನರಗಿ, ಜತ್ರಾಟ, ಕೋಡ್ನಿ, ಭಾಟನಾಗನೂರ, ಬುದಿಹಾಳ, ಕೊಗನೋಳಿ, ಬೋರಗಾಂವ, ಜನವಾಡ, ಮಲಿಕವಾಡ ಸೇರಿ ಸುಮಾರು 39 ಗ್ರಾಮಗಳಲ್ಲಿನ ಕಬ್ಬು ಬರ ಮತ್ತು ನೆರೆಗೆ ತುತ್ತಾಗಿದೆ.

ಮಹಾರಾಷ್ಟ್ರದತ್ತ ರೈತರ ಚಿತ್ತ: ಮಹಾರಾಷ್ಟ್ರದಲ್ಲೂ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದರಿಂದ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಹೆಚ್ಚಿನ ದರ ನೀಡುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ಕಬ್ಬು ಬೆಳೆಗಾರರ ಚಿತ್ತ ಮಹಾರಾಷ್ಟ್ರದತ್ತ ನೆಟ್ಟಿದೆ. ಆದರೆ, ಕರ್ನಾಟಕದ ಕಾರ್ಖಾನೆಗಳೂ ಸಹ ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಲೇ ಇದ್ದಾರೆ. ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳು ಆರಂಭವಾಗುವ ಮುನ್ನ ರೈತರು ಹಾಗೂ ಸಂಘಟನೆಗಳು ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಹೋರಾಟ ಲಕಾರಿಯಾಗದಿರುವುದು ದುರಾದೃಷ್ಟ ಸಂಗತಿ ಎಂದು ಕಬ್ಬು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಿಲ್‌ನ್ನು ತಕ್ಷಣ ಪಾವತಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಜ್ಯದ ಕಬ್ಬು ಮಹಾರಾಷ್ಟ್ರ ಕಾರ್ಖಾನೆಗಳ ಪಾಲಾಗುವ ಸಾಧ್ಯತೆಯೂ ಇದೆ. ಅಲ್ಲದೆ ಮಹಾರಾಷ್ಟ್ರ ಮಾದರಿಯಲ್ಲೇ ಬೆಲೆ ನೀಡಲು ರಾಜ್ಯ ಸರ್ಕಾರ ಮತ್ತು ಕಾರ್ಖಾನೆಗಳು ಮುಂದಾಗಬೇಕು ಎಂದು
ಕಬ್ಬು ಬೆಳೆಗಾರರು ಒತ್ತಾಯಿಸಿದ್ದಾರೆ.


ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಪ್ರವಾಹಪೀಡಿತ ಪ್ರದೇಶದಲ್ಲಿ ಹಾನಿಗೀಡಾದ ಎಲ್ಲ ಬೆಳೆಗಳ ಸರ್ವೇ ಕಾರ್ಯ ಕೃಷಿ ಇಲಾಖೆ ವತಿಯಿಂದ ಮಾಡಲಾಗುತ್ತಿದ್ದು, ಕಾರ್ಯ ಮುಗದ ಬಳಿಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು.
| ರವೀಂದ್ರ ಕರಲಿಂಗಣ್ಣವರ ಉಪವಿಭಾಗೀಯ ಅದಿಕಾರಿ, ಚಿಕ್ಕೋಡಿ

ಇಳುವರಿ ಆಧಾರದಲ್ಲಿ ಪರಿಹಾರ ನೀಡಿ

ಕೃಷ್ಣಾ ನದಿ ಪ್ರವಾಹದಿಂದ ಕಬ್ಬಿನ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ ಕಬ್ಬಿನ ಇಳುವರಿ ಆಧಾರದ ಮೇಲೆ ಪರಿಹಾರ ನೀಡಬೇಕು. ಸದ್ಯ ಹೊಲದಲ್ಲಿ ನಾಶವಾಗಿರುವ ಬೆಳೆಯನ್ನು ಕಟಾವು ಮಾಡಿ ಸ್ವಚ್ಛಗೊಳಿಸಲು ಪ್ರತಿ ಎಕರೆಗೆ 3 ಸಾವಿರ ರೂ.ಖರ್ಚಾಗುತ್ತದೆ. ಹಾಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಮಾಜರಿ ಗ್ರಾಮದ ಕಬ್ಬು ಬೆಳೆಗಾರ ಶಂಕರ ಕೋರೆ ಆಗ್ರಹಿಸದ್ದಾರೆ.

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...