ಶರಣ ಸಂಸ್ಕೃತಿ ಪರಿಪಾಲಕ ಪರಿಪೂರ್ಣ ಮನುಷ್ಯ

blank

ಬೆಳಗಾವಿ: ಇತ್ತೀಚಿನ ದಿನಮಾನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಭರಾಟೆಯಲ್ಲಿ ಶರಣರ ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳಿಗೆ ಶರಣರ ಸಂಸ್ಕೃತಿ ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

blank

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ನಾಗನೂರು ಶಿವ ಬಸವೇಶ್ವರ ಟ್ರಸ್ಟ್‌ನ ಚಿನ್ನಮ್ಮ ಬಸವಂತಯ್ಯ ಹಿರೇಮಠ ವದ್ಧಾಶ್ರಮದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಸಿಕ ವಚನ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಜೀವನದಲ್ಲಿ ವಚನ ಸಂಸ್ಕೃತಿ ಅಳವಡಿಸಿಕೊಂಡರೆ ಮನುಷ್ಯರಾಗಿ ಬಾಳಲು ಸಾಧ್ಯ. ನಮ್ಮ ನಡೆನುಡಿಗಳಲ್ಲಿ ಸಮಾನತೆ ಎದ್ದು ಕಾಣಬೇಕಾಗಿದೆ ಎಂದರು.

ಜೀವನದುದ್ದಕ್ಕೂ ದಾಸೋಹ ಸೇವೆಯಲ್ಲಿ ನಿರತರಾಗಿರುವ ಶರಣ ದಂಪತಿಗಳಾದ ಕೆಂಪಣ್ಣ ರಾಮಾಪುರೆ ಸೇವೆ ಸ್ಮರಿಸಿ, ಅವರ 43ನೇ ವಿವಾಹ ವಾರ್ಷಿಕೋತ್ಸವ ನಿಮಿತ್ತ ಅವರಿಗೆ ಆಶೀರ್ವದಿಸಿದರು.

ಅಧ್ಯಕ್ಷತೆ ವಹಿಸಿ ಬೆಳಗಾವಿ ಜಾಗತ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಲಿಂಗಾಯತ ಮಹಾ ಮಹಾಸಭೆ ಮೂಲಕ ಶರಣ ಸಂಸ್ಕೃತಿ ಪ್ರಚಾರಕ್ಕೆ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ವದ್ಧಾಶ್ರಮ ಸಂಯೋಜಕ ಎಂ.ಎಸ್. ಚೌಗಲಾ, ಸಂಚಾರಿ ಗುರುಬಸವ ದಳದ ಮಹಾಂತೇಶ ತೋರನಗಟ್ಟಿ, ಶಿವಾನಂದ ಸಂಗಿ, ಬಸವರಾಜ ಮತ್ತಿಕೊಪ್ಪ, ಲಿಂಗಾಯತ ಮಹಾಸಭಾದ ಸುರೇಶ ನರಗುಂದ, ಯರಗಟ್ಟಿ ಕೆಪಿಎಸ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಇತರರಿದ್ದರು.

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank