ಮಾಂಜರಿ: ವಿಶ್ವಶಾಂತಿಯ ಮರ್ಮ ಅರಿತವರು ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ. ಬಸವಾದಿ ಶರಣರ ಆಶಯದಂತೆ ನಡೆದರೆ ನಮ್ಮೆಲ್ಲರ ಬದುಕು ಸಾರ್ಥಕವಾಗುತ್ತದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಜರುಗಿದ ಪ್ರವಚನ ಕಾರ್ಯಕ್ರಮದ ಸಮಾರೋಪದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
12ನೇ ಶತಮಾನದ ವಚನಗಳು ಸತ್ಸಂಗದ ದಾರಿ ದೀಪಗಳಾಗಿವೆ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ದೊಡ್ಡ ಕ್ರಾಂತಿ ಮಾಡಿ ಸಾಮಾರಸ್ಯದ ಬದುಕು ಕಟ್ಟಿಕೊಳ್ಳಲು ಶರಣರು ತೋರಿಸಿದ ಮಾರ್ಗದಲ್ಲಿ ನಾವು ಸಾಗಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಎಲ್.ಬಿ.ಚೌಗಲಾ ಮಾತನಾಡಿದರು. ಶಿವಾಲಯ ಕಮಿಟಿ ಬಿ.ಎಂ.ಕೋರೆ, ಕುಮಾರ ಕೋರೆ, ವಿವೇಕ ನಷ್ಟೆ, ಪ್ರಶಾಂತ ಕೋರೆ, ತಮ್ಮಣ್ಣ ಗುಂಡಕಲ್ಲೆ, ತುಕಾರಾಂ ಪಾಟೀಲ, ಅಣ್ಣಾಸಾಹೇಬ ಜಕಾತಿ, ನಾಗೇಶ ಮುಜುಕರ ಇತರರಿದ್ದರು.