ಪರೀಕ್ಷೆಗೆ ವಿದ್ಯಾರ್ಥಿಗಳು ಹೆದರಬಾರದು

ವಿಜಯವಾಣಿ ಸುದ್ದಿಜಾಲ ಸುರಪುರ
ವಿದ್ಯಾರ್ಥಿ ಜೀವನಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವುದರೊಂದಿಗೆ ಯಾವುದೇ ಪರೀಕ್ಷೆಗೆ ಹೆದರಬಾರದು ಎಂದು ಆಳ್ವಾಸ್ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ ಆಳ್ವಾ ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಯಾವತ್ತು ವಿದ್ಯಾರ್ಥಿಗಳು ನಿರಾಶಾಭಾವ ಹೊಂದಬಾರದು. ವಿದ್ಯಾರ್ಥಿಗಳು ವಿಷಯಗಳನ್ನು ಅರ್ಥಮಾಡಿಕೊಂಡು ಅದರ ಕುರಿತು ಹಿಡಿತ ಸಾಧಿಸಬೇಕು ಎಂದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇನ್ನೂ 3 ತಿಂಗಳ ಕಾಲವಕಾಶವಿದೆ. ಈ ಮೂರು ತಿಂಗಳಲ್ಲಿ ವಿದ್ಯಾರ್ಥಿಗಳು ಸರಿಯಾದ ವೇಳಾಪಟ್ಟಿ ರಚಿಸಿ ಅಭ್ಯಾಸ ಮಾಡಬೇಕು. ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣ, ಟಿವಿಯಿಂದ ದೂರವಿರಿ. ಇದರಿಂದ ನಿಮ್ಮ ಓದಿಗೆ ತೊಂದರೆ ಆಗಬಹುದು ಎಂದು ಹೇಳಿದರು.

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಹತ್ವದ ಘಟ್ಟದಲ್ಲಿದ್ದೀರಿ. ನಿಮಗೆ ಯಾವುದೇ ವಿಷಗಳಲ್ಲಿ ಅನುಮಾನ, ಸಮಸ್ಯೆಗಳಿದ್ದರೆ ಮುಜುಗರವಿಲ್ಲದೆ ನಿಮ್ಮ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳಿ. ನಿಮ್ಮ ಸಂಶಂಯಗಳ ಬಗ್ಗೆ ಯಾವತ್ತೂ ಮುಜುಗರ ಬೇಡ. ನಮಗಾಗಿಯೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.

ಪ್ರಮುಖ ಬಸವರಾಜ ಜಮದರಖಾನಿ ಇತರರಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಜಾಳವಾದಿ ನಿರೂಪಣೆ ಮಾಡಿದರು. ರಾಜಶೇಖರ ದೇಸಾಯಿ ವಂದಿಸಿದರು. ನಗರದ ವಿವಿಧ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *