More

  ವಿವಾದ ಸೃಷ್ಟಿಸಿದ ನಟ ಸೂರ್ಯ ಪತ್ನಿ ಜ್ಯೋತಿಕಾ ಹೇಳಿಕೆ; ಒಂದು ಮುಗೀತು ಎನ್ನುವಷ್ಟಲ್ಲಿ ಮತ್ತೊಂದು ಶುರು!!

  ಹಲವು ಕಾರಣಗಳಿಂದ ಕಾಲಿವುಡ್​ ನಟ ಸೂರ್ಯ ಮತ್ತು ಪತ್ನಿ ಜ್ಯೋತಿಕಾ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ಈ ಜೋಡಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಅವಾರ್ಡ್​​ ಕಾರ್ಯಕ್ರಮದಲ್ಲಿ ಜ್ಯೋತಿಕಾ ಹೇಳಿಕೆ ನೀಡಿದ್ದರು. ಆ ಹೇಳಿಕೆ ಬಗ್ಗೆ ಪರವಿರೋಧ ಚರ್ಚೆ ಆಗುತ್ತಿದ್ದಂತೆ, ಪತ್ನಿ ಪರವಾಗಿ ನಟ ಸೂರ್ಯ ಮಾತನಾಡಿದ್ದಾರೆ.
  ‘ನಾಡಿನ ಜನತೆ ಮತ್ತು ಸರ್ಕಾರ ದೇವಸ್ಥಾನಕ್ಕೆ ಮಾಡುವ ಕಾಳಜಿಯನ್ನು ರಾಜ್ಯದ ಶಾಲೆ ಮತ್ತು ಆಸ್ಪತ್ರೆಗಳಿಗೆ ಮಾಡಿದ್ದರೆ, ಇಷ್ಟೊತ್ತಿಗಾಗಲೇ ಆಸ್ಪತ್ರೆಗಳ ಅಭಿವೃದ್ಧಿ ಆಗಿರುತ್ತಿತ್ತು’ ಎಂದಿದ್ದರು. ಜ್ಯೋತಿಕಾ ನೀಡಿದ ಈ ಹೇಳಿಕೆ, ಧಾರ್ಮಿಕತೆ ದೃಷ್ಟಿಯಿಂದ ಪರವಿರೋಧಗಳಿಗೆ ಒಗ್ಗರಣೆ ಹಾಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿದ್ದವು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೂರ್ಯ, ‘ನನ್ನ ಹೆಂಡತಿ ಹೇಳಿದ್ದು ಸರಿಯಾಗಿದೆ’ ಎಂದಿದ್ದಾರೆ.
  ‘ಮರ ಸುಮ್ಮನೆ ನಿಂತರೂ, ಗಾಳಿ ಮಾತ್ರ ಸುಮ್ಮನಿರಲ್ಲ. ಜ್ಯೋತಿಕಾ ಹೇಳಿಕೆ ಬಗ್ಗೆ ಬೇರೆ ಬೇರೆ ಮಾತುಗಳು ಕೇಳಿಬರುತ್ತಿವೆ. ಅವಳು ಹೇಳಿದ್ದು, ದೇವಸ್ಥಾನಗಳಿಗೆ ದೇಣಿಗೆ ನೀಡುವ ಮೊತ್ತವನ್ನು, ಶಾಲೆ ಮತ್ತು ಆಸ್ಪತ್ರೆಗಳಿಗೆ ನೀಡಿದರೆ ಒಳ್ಳೇದು ಎಂದಿದ್ದಾರೆ. ಯಾಕೆ ಇದನ್ನು ಒಂದಷ್ಟು ಮಂದಿ ಬೇರೆ ರೀತಿಯಲ್ಲಿ ನೋಡುತ್ತಿದ್ದೀರಿ. ಧರ್ಮಕ್ಕಿಂತ ಮಾನವೀಯತೆ ದೊಡ್ಡದು’ ಎಂದಿದ್ದಾರೆ. (ಏಜೆನ್ಸೀಸ್​)

  See also  ನರೇಗಾ ದುಡಿಯುವ ವರ್ಗಕ್ಕೆ ಅನುಕೂಲ; ನ್ಯಾಯಾಧೀಶ ಸಿದ್ದರಾಜು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts