ಬಿಜೆಪಿ ವಿರುದ್ಧ ಬಿಜೆಪಿ ಶಾಸಕನಿಂದಲೇ ವಿವಾದಿತ ಹೇಳಿಕೆ

ತುಮಕೂರು: ಬಿಜೆಪಿ, ಬಿ.ಎಸ್​ ಯಡಿಯೂರಪ್ಪ ಮತ್ತು ಆರ್​ಎಸ್​ಎಸ್​ ವಿರುದ್ಧ ತುಮಕೂರು ಗ್ರಾಮಾಂತರ ಶಾಸಕ ಸುರೇಶ್​ ಗೌಡ ಅವರು ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಏನಿದೆ ಅದರಲ್ಲಿ?

“ಏನೇ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎನ್ನುವುದು ಯಡಿಯೂರಪ್ಪನವರಿಗೂ ಗೊತ್ತು. ಅತಂತ್ರ ವಿಧಾನಸಭೆಯಾಗುತ್ತೆ ಅವಾಗ ನನ್ ಸಪೋರ್ಟ್ ಬೇಕಾಗುತ್ತೆ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗಬಾರದು. ಏನೇ ಮಾಡಿದ್ರೂ ಬಿಜೆಪಿಗೆ ಇಮೇಜ್ ಇಲ್ಲ. ಜೈಲಿಗೆ ಹೋಗಿ ಬಂದಿರೋದು ಇದೆಲ್ಲಾ ಕಾರಣದಿಂದ ಬಿಜೆಪಿಗೆ ಅಧಿಕಾರ ಸಿಗುವುದಿಲ್ಲ. 100 ಕೋಟಿ ಅಲ್ಲ 500 ಕೋಟಿ ಖರ್ಚು ಮಾಡಿದ್ರೂ ನಮ್ ಪಾರ್ಟಿ ಅಧಿಕಾರಕ್ಕೆ ಬರಲ್ಲ,” ಎನ್ನುವ ಹೇಳಿಕೆಗಳು ವಿಡಿಯೋದಲ್ಲಿದೆ.

“ಯಡಿಯೂರಪ್ಪ ನಮ್ಮ ಹತ್ತಿರ ಸತ್ಯ ಹೇಳಲಿ. ಅದು ಬಿಟ್ಟು ಪ್ರಾಣಕ್ಕೆ ಪ್ರಾಣ ಕೊಡೋರನ್ನ ಕೈ ಬಿಟ್ಟಿದ್ದಾರೆ. ಹೈಕಮಾಂಡ್​ಗೆ ಗೌರವ ಕೊಡದಿದ್ದಕ್ಕೆ ಯಡಿಯೂರಪ್ಪ ಹೊರಬರಬೇಕಾಯ್ತು. ಆರ್‌ಎಸ್ಎಸ್ ನವರು ಅಂತಹ ಅಡ್ವಾಣಿ ಅವರನ್ನೇ ಹೊಡೆದು ಹಾಕಿದರು. ಆರ್​ಎಸ್​ಎಸ್​ನವರಷ್ಟು ಕರಪ್ಟೆಡ್ ಬೇರಾರೂ ಇಲ್ಲ,” ಇನ್ನು ವಿಡಿಯೋದಲ್ಲಿ ಸಿಟಿ ರವಿ ಅವರ ವಿರುದ್ಧವೂ ಸುರೇಶ್ ಗೌಡ ಅಶ್ಲೀಲ ಪದ ಬಳಸಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *