ಮಂಗಳೂರು: ಸುರತ್ಕಲ್ ಕೃಷ್ಣಾಪುರ 7 ನೇ ಬ್ಲಾಕ್ ನಲ್ಲಿ ಬದ್ರುಲ್ ಹುದಾ ಜುಮ್ಮಾ ಮಸೀದಿ ಮತ್ತು ಮದರಸ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಭಾಷಣ ಕಾರ್ಯಕ್ರಮ ಫೆ.14 ರಿಂದ 16 ತನಕ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.14 ರಂದು ರಾತ್ರಿ 8.30 ಕ್ಕೆ ಕೃಷ್ಣಾಪುರ ಮುಸ್ಲಿಮ್ ಜಮಾತ್ ಖಾಝಿ ಇ.ಕೆ.ಇಬ್ರಾಹಿಂ ಮುಸ್ಲಿಯಾರ್ ಧಾರ್ಮಿಕ ಭಾಷಣ ಉದ್ಘಾಟಿಸುವರು. ಕಾರಂದೂರು- ಕೋಝಿಕ್ಕೋಡ್ ಮರ್ಕಝ್ ಸಖಾಫತಿ ಸುನ್ನಿಯ ಪಿಡಿಆರ್ ಡೈರೆಕ್ಟರ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರು ತಂಙಳ್ ಮುಖ್ಯ ಭಾಷಣ ನಡೆಸುವರು ಎಂದು ಅವರು ಹೇಳಿದರು.
ಫೆ.15 ರಂದು ಋಆತ್ರಿ 8.30 ಕ್ಕೆ ಉಪ್ಪಿನಂಗಡಿ ಮೂರುಗೋಳಿ ಖತೀಬ ಅತಾಉಲ್ಲಾ ಹಿಮಮಿ ಸಖಾಫಿ ಅಲ್ ಘುರ್ಖಾನಿ ಮುಖ್ಯ ಭಾಷಣ ನಡೆಸುವರು. 16 ರಂದು ಬೆಳಗ್ಗೆ 10.30 ಕ್ಕೆ ಮಸೀದಿ ಮತ್ತು ಮದರಸದ ನೂತನ ಕಟ್ಟಡವನ್ನು ಖುದುವತುಸ್ಸಾದಾತ್ ಅಸ್ಸಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಮತ್ತು ಕಾಜೂರು ಅಸ್ಸಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಉದ್ಘಾಟಿಸಿವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಟಿ.ಎಂ.ಅಬೂಬಕ್ಕರ್, ಸದಸ್ಯರಾದ ಮಹಮ್ಮದ್ ಆಲಿ, ಉಮ್ಮರ್ ಫಾರೂಕ್, ಬಶೀರ್ ಅಹಮ್ಮದ್ ಹಾಗೂ ಅಬ್ಬಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.
ಕೃಷ್ಣಾಪುರ ಬದ್ರುಲ್ ಹುದಾ ಮಸೀದಿ ಮತ್ತು ಮದರಸಕ್ಕೆ ಹೊಸ ಕಟ್ಟಡ

You Might Also Like
ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್ | Summer Tips
Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…
ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs
Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು? Health Tips
Health Tips: ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು…