600 ಉದ್ಯೋಗಿಗಳಿಗೆ ವಜ್ರ ವ್ಯಾಪಾರಿಯಿಂದ ದೀಪಾವಳಿಗೆ ಕಾರು ಗಿಫ್ಟ್​!

ನವದೆಹಲಿ: ಸೂರತ್​ ಮೂಲದ ಬಿಲಿಯನೇರ್ ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ತಮ್ಮ ದೀಪಾವಳಿ ಉಡುಗೊರೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಧೋಲಾಕಿಯಾ ಹರೇ ಕೃಷ್ಣ ಎಕ್ಸ್​ಪೋರ್ಟರ್ಸ್​ ಕಂಪನಿಯ ಮಾಲೀಕ. ಈತ ತನ್ನ ಕಂಪನಿಯ 600 ಉದ್ಯೋಗಿಗಳಿಗೆ ಈ ವರ್ಷದ ದೀಪಾವಳಿ ಉಡುಗೊರೆಯನ್ನಾಗಿ ಕಾರುಗಳನ್ನು ನೀಡುತ್ತಿದ್ದು, ಇನ್ನಿತರ ಉದ್ಯೋಗಿಗಳಿಗೆ ಫ್ಲ್ಯಾಟ್​ ಮತ್ತು ಆಭರಣಗಳನ್ನು ಗಿಫ್ಟ್​ ಆಗಿ ನೀಡಲಿದ್ದಾರೆ.

ತಮ್ಮ ಕಂಪನಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಮೂವರು ಉದ್ಯೋಗಿಗಳಿಗೆ ಧೋಲಾಕಿಯಾ ಅವರು ಕಳೆದ ಆಗಸ್ಟ್​ ತಿಂಗಳಲ್ಲಿ 3 ಕೋಟಿ ರೂ. ಮೌಲ್ಯದ ಮೂರು ಮರ್ಸಿಡಿಸ್-ಬೆನ್ಜ್ ಜಿಎಲ್​ಎಸ್​ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದರು.

ದೀಪಾವಳಿ ಉಡುಗೊರೆಯಿಂದ ಎಲ್ಲರಿಗೂ ಪರಿಚಿತರಾಗಿರುವ ಪರೋಪಕಾರಿ ಧೋಲಾಕಿಯಾ ಅವರು ಹಿಂದೆ ತನ್ನ ಉದ್ಯೋಗಿಗಳಿಗೆ ತಿಂಗಳ ಕಂತಿನಲ್ಲಿ ಸಾವಿರಾರು ಕಾರು ಹಾಗೂ ಫ್ಲ್ಯಾಟ್​ಗಳನ್ನು ನೀಡಿದ್ದರು.

ದೀಪಾವಳಿಯ ದುಬಾರಿ ಬೋನಸ್​ ಹಾಗೂ ಉಡುಗೊರೆ ಹರೇ ಕೃಷ್ಣ ಎಕ್ಸ್​ಪೋರ್ಟ್ಸ್​ ಕಂಪನಿಯ ವಾರ್ಷಿಕ ಆಚರಣೆಯಾಗಿದೆ.

ಧೋಲಾಕಿಯಾ ಸೌರಾಷ್ಟ್ರ ಪ್ರದೇಶದ ಅಮ್ರೆಲಿ ಜಿಲ್ಲೆಯ ದೂಧಲಾ ಹಳ್ಳಿಯಿಂದ ಬಂದವರು. ತಮ್ಮ ಅಂಕಲ್​ನಿಂದ ಸಾಲ ಪಡೆದು ಬಿಸಿನೆಸ್​ ಮಾಡಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. (ಏಜೆನ್ಸೀಸ್​)