ವಿಜಯಪುರದ ಸುಪ್ರಿಯಾ ರಾಜ್ಯಕ್ಕೆ ಪ್ರಥಮ

ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 6 ಹೆಚ್ಚುವರಿ ಅಂಕ ಪಡೆದ ವಿಜಯಪುರದ ಇಟ್ಟಂಗಿಹಾಳದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸುಪ್ರಿಯಾ ಜೋಶಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಒಟ್ಟು 619 ಅಂಕ ಪಡೆದಿದ್ದ ಸುಪ್ರಿಯಾ, ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಗಣಿತದಲ್ಲಿ ತಲಾ ಮೂರು ಅಂಕದಂತೆ 6 ಹೆಚ್ಚುವರಿ ಅಂಕ ಪಡೆದಿದ್ದು ಒಟ್ಟಾರೆ ಲಿತಾಂಶ 625ಕ್ಕೆ 625 ಅಂಕ ಪಡೆದಿದ್ದಾರೆ.
ಇಂಗ್ಲಿಷ್‌ನಲ್ಲಿ 125ಕ್ಕೆ 125, ಕನ್ನಡ 100ಕ್ಕೆ 100, ಹಿಂದಿ 100, ಗಣಿತ 100, ಸಮಾಜ ವಿಜ್ಞಾನ 100, ವಿಜ್ಞಾನ 100 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ನಿರ್ದೇಶಕ ಮಂಡಳಿ ಶ್ಲಾಸಿದ್ದಾರೆ. ಕೋಟ್
ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಪ್ರಥಮ ರ‌್ಯಾಂಕ್ ಪಡೆದಿದ್ದು ವಿಜಯಪುರ ಇತಿಹಾಸದಲ್ಲೇ ಪ್ರಥಮ. ಈ ಭಾಗದ ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ಮಾಡಬಲ್ಲರು ಎಂಬುದಕ್ಕೆ ಇದು ಸಾಕ್ಷಿ. ನಮ್ಮ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ 15 ವರ್ಷಗಳ ಶ್ರಮದ ಫಲ ಇದಾಗಿದೆ.
ಬಸವರಾಜ ಕೌಲಗಿ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರು.

Leave a Reply

Your email address will not be published. Required fields are marked *