More

    ಜಮ್ಮು ಕಾಶ್ಮೀರಾದಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ತೀರ್ಪು ಶುಕ್ರವಾರ ಪ್ರಕಟಿಸಲಿರುವ ಸುಪ್ರೀಂ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಾದಲ್ಲಿ 370ನೇ ವಿಧಿ ಜಾರಿ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್​ ನಾಳೆ (ಶುಕ್ರವಾರ, ಜ.10) ಪ್ರಕಟಿಸಲಿದೆ.

    ಕಾಂಗ್ರೆಸ್​ನ ಹಿರಿಯ ಮುಖಂಡ ಗುಲಾಮ ನಬಿ ಅಜಾದ್​ ಮತ್ತು ಇತರರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

    ನ್ಯಾಯಮೂರ್ತಿಗಳಾದ ಎನ್​.ವಿ. ರಮಣ, ಆರ್​. ಸುಭಾಷ್​ರೆಡ್ಡಿ ಮತ್ತು ಬಿ.ಆರ್​. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ ನವೆಂಬರ್​ 27 ರಂದು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಲಿದೆ.

    370ನೇ ವಿಧಿ ಜಾರಿಯಾದ ಬಗ್ಗೆ ನವೆಂಬರ್​ 21ರಂದು ನಡೆದ ವಿಚಾರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರಾದಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿತ್ತು. ಈ ಬಗ್ಗೆ ಕೋರ್ಟ್​ಗೆ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧಗಳನ್ನು ಹೇರಿದ್ದು, ಈ ವೇಳೆ ಒಂದು ಗುಂಡು ಸಿಡಿಸಲಾಗಿಲ್ಲ ಹಾಗೂ ಒಂದೇ ಒಂದು ಜೀವಕ್ಕೂ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು.

    ಅಜಾದ್ ಅವರಲ್ಲದೆ ಕಾಶ್ಮೀರಾ ಟೈಂಸ್​ ಪತ್ರಿಕೆಯ ಸಂಪಾದಕರಾದ ಅನುರಾಧ ಬಾಸಿನ್​ ಅವರೂ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಕೆಲ ನಿರ್ಬಂಧಗಳನ್ನು ಪ್ರಶ್ನಿಸಿದ್ದರು.

    ಇಲ್ಲಿನ ಗಡಿ ಭಾಗದಲ್ಲಿ ಹಲವು ಉಗ್ರರನ್ನು ತಂದಿರಿಸಲಾಗುತ್ತಿದೆ. ಇದು ಸುಮಾರು ವರ್ಷಗಲಿಂದ ನಡೆಯುತ್ತಿದೆ. ಇಲ್ಲಿ ಸ್ಥಳೀಯ ಉಗ್ರರು ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳು ನಾಗರಿಕರನ್ನು ಸೆರೆಯಲ್ಲಿರಿಸಿಕೊಂಡಿದ್ದವು. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸದಿದ್ದರೆ ಅದು ಸರ್ಕಾರದ ಮೂರ್ಖತನವಾಗುತ್ತಿತ್ತು ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts