More

    16-18 ವರ್ಷ ವಯಸ್ಸಿನವರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಮಾಡಬಹುದೇ?

    ದೆಹಲಿ: 16 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರು ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ( Consensual sex) ತೊಡಗಿಕೊಂಡರೆ ಅದನ್ನ ಅಪರಾಧವಲ್ಲ ಎಂದು ಮಾಡಬಹುದೇ? ಎಂಬ ಪ್ರಶ್ನೆ ಇದೀಗ ಸುಪ್ರೀಂ ಕೇಂದ್ರದ ಅಭಿಪ್ರಾಯ ಕೇಳಲು ಮುಂದಾಗಿದೆ.


    16 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರು ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಲ್ಲಿ, ಅದನ್ನು ಅತ್ಯಾಚಾರದ ಅಪರಾಧ ಎಂದು ಹೇಳುವ ಕಾನೂನನ್ನು ಅಮಾನ್ಯಗೊಳಿಸುವ ನಿರ್ದೇಶನವನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುವ ವೇಳೆ, ಈ ಬಗ್ಗೆ ಕೇಂದ್ರ ಅಭಿಪ್ರಾಯ ಏನು? ಎಂಬುದನ್ನು ಕೂಡ ಕೇಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರದ ಅಭಿಪ್ರಾಯ ಕೇಳಿದ್ದು, ಸರ್ಕಾರ ಸೇರಿದಂತೆ ಕೆಲವು ಶಾಸನಬದ್ಧ ಸಂಸ್ಥೆಗಳಿಗೆ ನೋಟಿಸ್​​ ಜಾರಿ ಮಾಡಿದೆ.


    ಈ ಬಗ್ಗೆ ಸರ್ಕಾರದ ಅಭಿಪ್ರಾಯ ಮುಖ್ಯ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ತಿಳಿಸುವಂತೆ ನೋಟಿಸ್​ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಕೀಲ ಹರ್ಷ ವಿಭೋರ್ ಸಿಂಘಾಲ್ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸಮ್ಮತಿ ನೀಡಿದೆ.


    ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಗೃಹ ವ್ಯವಹಾರಗಳು ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಇತರ ಕೆಲವು ಶಾಸನಬದ್ಧ ಸಂಸ್ಥೆಗಳಿಗೆ ನೋಟಿಸ್ ನೀಡಿದೆ.


    ಅರ್ಜಿಯಲ್ಲಿ ತಿಳಿಸಿರುವಂತೆ 16 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಅತ್ಯಾಚಾರ ಕಾನೂನಿನಡಿಯಲ್ಲಿ ಪ್ರಶ್ನಿಸಲಾಗುತ್ತದೆ. ಆದರೆ ಅವರ ಒಪ್ಪಿಗೆ ಇದ್ದು ನಡೆದ ಲೈಂಗಿಕ ಕ್ರಿಯೆಯನ್ನು ಕಾನೂನಿನ ಮೂಲಕ ಅತ್ಯಾಚಾರ ಅಪರಾಧ ಎಂದು ಪರಿಗಣಿಸುವುದು ಸರಿಯಲ್ಲ, ಈ ಕಾನೂನನ್ನು ಶಾಸನಬದ್ಧವಾಗಿ ಅಮಾನ್ಯಗೊಳಿಸುವುದು ಸರಿ ಎಂದು ಹೇಳಲಾಗಿದೆ.


    ಆರ್ಟಿಕಲ್ 32 ಅಡಿಯಲ್ಲಿ ಮ್ಯಾಂಡಮಸ್ ರಿಟ್​​ನ್ನು ಪಾಸ್ ಮಾಡಿ ಆ ಮೂಲಕ 16+ ರಿಂದ 18 ವಯಸ್ಕರ ನಡುವಿನ ಸ್ವಯಂಪ್ರೇರಿತ ಸಮ್ಮತಿಯ ಲೈಂಗಿಕ ಸಂಪರ್ಕದ ಎಲ್ಲಾ ಪ್ರಕರಣಗಳಿಗೆ ಅನ್ವಯಿಸಿದಂತೆ ಶಾಸನಬದ್ಧವಾಗಿ ಅತ್ಯಾಚಾರದ ಕಾನೂನನ್ನು ಅಪರಾಧೀಕರಿಸಲು 142 ಅಡಿಯಲ್ಲಿ ಅದರ ಅಧಿಕಾರವನ್ನು ಚಲಾಯಿಸಿ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts