ಮತದಾರರ ಗುರುತಿನ ಚೀಟಿಗೆ ಆಧಾರ್​ ಜೋಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ

ನವದೆಹಲಿ: ಮತದಾರರ ಗುರುತಿನ ಚೀಟಿಗಳನ್ನು ಆಧಾರ್​ನೊಂದಿಗೆ ಹೊಂದಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ಶುಕ್ರವಾರ ತಳ್ಳಿಹಾಕಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರಿದ್ದ ಪೀಠ, ವಿಚಾರಣೆಗೆ ನಿರಾಕರಿಸಿತು. ಅಲ್ಲದೆ, ಈ ಕುರಿತು ಭಾರತೀಯ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲು ಪೀಠ ಸೂಚನೆ ನೀಡಿತು.

“ನೀವು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಅದು ಸೂಕ್ತ ಆದೇಶ ನೀಡಲಿದೆ,” ಎಂದು ಅರ್ಜಿದಾರರ ಪರ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರಿಗೆ ಕೋರ್ಟ್​ ತಿಳಿಸಿದೆ.


Leave a Reply

Your email address will not be published. Required fields are marked *